ಅತ್ಯಾಚಾರ ಪ್ರಕರಣ: ಚಿನ್ಮಯಾನಂದರಿಂದ 200 ಫೋನ್ ಕಾಲ್, ಬಾಡಿ ಮಸಾಜ್; ತಪ್ಪೊಪ್ಪಿಕೊಂಡ ಮಾಜಿ ಕೇಂದ್ರ ಸಚಿವ

ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕಾನೂನು ವಿದ್ಯಾರ್ಥಿನಿ ಮಾಡಿದ್ದ ಎಲ್ಲ ರೀತಿಯ ಆರೋಪಗಳನ್ನು ಸ್ವಾಮಿ ಚಿನ್ಮಯಾನಂದ ಅವರು ಒಪ್ಪಿಕೊಂಡಿದ್ದಾರೆ...
ಚಿನ್ಮಯಾನಂದ
ಚಿನ್ಮಯಾನಂದ

ಶಹಜಾನ್ಪುರ್: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕಾನೂನು ವಿದ್ಯಾರ್ಥಿನಿ ಮಾಡಿದ್ದ ಎಲ್ಲ ರೀತಿಯ ಆರೋಪಗಳನ್ನು ಸ್ವಾಮಿ ಚಿನ್ಮಯಾನಂದ ಅವರು ಒಪ್ಪಿಕೊಂಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಚಿನ್ಮಯಾನಂದ್ ಅವರು ತಮ್ಮ ಕೃತ್ಯಗಳ ಬಗ್ಗೆ ಅಸಹ್ಯ ಪಟ್ಟುಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ನವೀನ್ ಅರೋರಾ ಅವರು ಹೇಳಿದ್ದಾರೆ.

ಎಸ್ಐಟಿ ಆರೋಪಿ ವಿರುದ್ಧ ಇನ್ನು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ ಅವರು ಲೈಂಗಿಕ ದೌರ್ಜನ್ಯ ಮತ್ತು ಬಾಡಿ ಮಸಾಜ್​ ಸೇರಿದಂತೆ ತಮ್ಮ ವಿರುದ್ಧ ಮಾಡಲಾದ ಬಹುತೇಕ ಆರೋಪಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ಮಾಡಲಾಗಿರುವ ಎಲ್ಲ ರೀತಿಯ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸ್ವಾಮಿ ಚಿನ್ಮಯಾನಂದ ಅವರು ತಾವು ಮಾಡಿರುವ ಕೃತ್ಯ ಬಗ್ಗೆ ಅಸಹ್ಯ ಪಟ್ಟುಕೊಂಡಿದ್ದು, ಈ ಬಗ್ಗೆ ಹೆಚ್ಚಾಗಿ ಮತ್ತೆನನ್ನು ಹೇಳಲಿಲ್ಲ ಎಂದು ಎಸ್​ಐಟಿ ಮುಖ್ಯಸ್ಥರು ವರದಿಗಾರರಿಗೆ ತಿಳಿಸಿದ್ದಾರೆ.

ಸ್ವಾಮಿ ಚಿನ್ಮಯಾನಂದ ಮಾತನಾಡಿರುವ ಫೋನ್​ ಸಂಭಾಷಣೆಯನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿದೆ. ಯುವತಿಯೊಂದಿಗೆ ಸ್ವಾಮಿ ಚಿನ್ಮಯಾನಂದ 200ಕ್ಕೂ ಹೆಚ್ಚು ಬಾರಿ ಫೋನ್ ಮಾಡಿ ಅಶ್ಲೀಲ​ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದೆ ಎಂದು ಅರೋರಾ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವರು ಒಂದು ವರ್ಷಗಳ ಕಾಲ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಶೆಹಜಾನ್ಪುರದ ಕಾನೂನು ವಿದ್ಯಾರ್ಥಿನಿ ಆರೋಪಿಸಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿ, ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ನಂತರವೂ ಆರೋಪಿಯನ್ನು ಬಂಧಿಸದಿರುವುದರ ಬಗ್ಗೆ ಸಂತ್ರಸ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಅಂತಿಮವಾಗಿ ಇಂದು ಆರೋಪಿ ಚಿನ್ಮಯಾನಂದ್ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com