ಕಾಶ್ಮೀರದಲ್ಲಿ 273 ಉಗ್ರರು, 100 ವಿದೇಶಿಯರು ಸಕ್ರಿಯವಾಗಿದ್ದಾರೆ: ಭದ್ರತಾ ಪಡೆಗಳು

ಕಳೆದ ವಾರ ಭದ್ರತಾ ಪಡೆಗಳು ಸಿದ್ಧಪಡಿಸಿರುವ ಉಗ್ರರ ಪಟ್ಟಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಲಭ್ಯವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು  273 ಉಗ್ರರು ಸಕ್ರಿಯವಾಗಿದ್ದಾರೆ.

Published: 20th September 2019 05:37 PM  |   Last Updated: 20th September 2019 05:37 PM   |  A+A-


JK-141

ಸಾಂದರ್ಭಿಕ ಚಿತ್ರ

Posted By : Lingaraj Badiger
Source : IANS

ಶ್ರೀನಗರ: ಕಳೆದ ವಾರ ಭದ್ರತಾ ಪಡೆಗಳು ಸಿದ್ಧಪಡಿಸಿರುವ ಉಗ್ರರ ಪಟ್ಟಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಲಭ್ಯವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು  273 ಉಗ್ರರು ಸಕ್ರಿಯವಾಗಿದ್ದಾರೆ.

273 ಉಗ್ರರ ಪೈಕಿ 158 ಉಗ್ರರು ದಕ್ಷಿಣ ಕಾಶ್ಮೀರ, 96 ಉಗ್ರರು ಉತ್ತರ ಕಾಶ್ಮೀರ ಮತ್ತು 19 ಉಗ್ರರು ಕೇಂದ್ರ ಕಾಶ್ಮೀರದವರಾಗಿದ್ದಾರೆ. ಅಲ್ಲದೆ 107 ವಿದೇಶಿ ಉಗ್ರರು ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಈ ಉಗ್ರರು ಲಷ್ಕರ್-ಎ-ತೊಯ್ಬಾ(ಎಲ್‌ಇಟಿ), ಹಿಜ್ಬುಲ್ ಮುಜಾಹಿದ್ದೀನ್, ಜೈಶ್-ಎ-ಮುಹಮ್ಮದ್ (ಜೆಎಂ) ಮತ್ತು ಅಲ್ ಬದ್ರ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, 112 ಉಗ್ರರೊಂದಿಗೆ ಎಲ್‌ಇಟಿ ಅಗ್ರಸ್ಥಾನದಲ್ಲಿದ್ದರೆ, 100 ಉಗ್ರರೊಂದಿಗೆ ಹಿಜ್ಬುಲ್ ಮುಜಾಹಿದ್ದೀನ್, 58 ಉಗ್ರರೊಂದಿಗೆ ಜೈಶ್-ಎ-ಮುಹಮ್ಮದ್ ಮತ್ತು ಮೂರು ಉಗ್ರರೊಂದಿಗೆ ಅಲ್ ಬದ್ರ್ ಕೊನೆಯ ಸ್ಥಾನದಲ್ಲಿದೆ.

ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯಕ್ಕೆ ಅತಿ ಹೆಚ್ಚು ಉಗ್ರರು ನುಸುಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp