ಈರುಳ್ಳಿ ಬೆಲೆ ಗಗನಕ್ಕೆ: ಗ್ರಾಹಕರು, ಬೆಳಗಾರರ ಕಣ್ಣಲ್ಲಿ ನೀರು ! 

ದೇಶದ ರಾಜಧಾನಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಮತ್ತೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಪರಿಣಾಮ ಗ್ರಾಹಕರು ಜೊತೆಗೆ ಬೆಳಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ ಬೆಳೆ ಹಾಳಾಯಿತಲ್ಲ ರೈತರು, ದುಬಾರಿ ದರದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಮತ್ತೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಪರಿಣಾಮ ಗ್ರಾಹಕರು ಜೊತೆಗೆ ಬೆಳಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ ಬೆಳೆ ಹಾಳಾಯಿತಲ್ಲ ರೈತರು, ದುಬಾರಿ ದರದಲ್ಲಿ ಹೇಗಪ್ಪ ಕೊಳ್ಳುವುದು ಎಂಬ ಚಿಂತೆಯಲ್ಲಿ ಗ್ರಾಹಕರು ಸಹ ಕಣ್ಣೀರು ಹಾಕುತ್ತಿದ್ದಾರೆ .

ಹಲವು ರಾಜ್ಯದಲ್ಲಿ ಸುರಿದ ಮಳೆ, ಪ್ರವಾಹದ ಕಾರಣ ಈರುಳ್ಳಿ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕಳೆದ ವಾರ ತರಕಾರಿಗಳ ಬೆಲೆ ಶೇ. 40ರಿಂದ 50ರಷ್ಟು ಏರಿಕೆಯಾಗಿದೆ.

ದೆಹಲಿಯ ಆಜಾದ್​ಪುರ ಮಂಡಿಯಲ್ಲಿ ಗುರುವಾರ ಈರುಳ್ಳಿಯ ದರ ಕೆಜಿಗೆ 30ರಿಂದ 46ರೂಪಾಯಿಗೆ ಮುಟ್ಟಿತ್ತು, ಮಹಾರಾಷ್ಟ್ರದ ನಾಸಿಕ್​ನಲ್ಲಿ ಈರುಳ್ಳಿಯ ಕೆಜಿಗೆ 50ರಿಂದ 55ರಂತೆ ಮಾರಾಟ ವಾಗುತ್ತಿದೆ. ಈರುಳ್ಳಿಯ ದಸ್ತಾನು ಈ ಬಾರಿ ಕಡಿಮೆಯಾದ್ದರಿಂದ ಸಗಟು ಮಾರುಕಟ್ಟೆಯಲ್ಲಿ ಅಗತ್ಯವಿರುವಷ್ಟು ಈರುಳ್ಳಿ ಲಭ್ಯವಿಲ್ಲದ ಕಾರಣ ಬೆಲೆ ಜೊತೆ ಜಾಸ್ತಿಯಾಗಿ ಗ್ರಾಹಕರು ಮತ್ತು ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. 

ಈರುಳ್ಳಿ ಬೆಲೆ ಹೆಚ್ಚಳವನ್ನು ತಡೆಯಲು ಸರ್ಕಾರ ಕಳೆದ ವಾರ ಈರುಳ್ಳಿಯ ಕನಿಷ್ಠ ರಫ್ತು ಬೆಲೆಯನ್ನು ಪ್ರತಿ ಟನ್‌ಗೆ 850 ಡಾಲರ್ ಇಳಿಸಿತು. ಮೂಲಗಳ ಪ್ರಕಾರ, ಸರ್ಕಾರದ ಈ ಹಂತದ ನಂತರ, ರಫ್ತು ಮಾಡುವ ಸಾಧ್ಯತೆ ಕಡಿಮೆಯಾಗಿದೆ. ದೇಶದಲ್ಲಿ ಆಹಾರಕ್ಕಾಗಿ ಈರುಳ್ಳಿ ಕೊರತೆ ಇದೆ ಎಂದು ನಾಸಿಕ್ ರಫ್ತುದಾರರೊಬ್ಬರು ತಿಳಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಈರುಳ್ಳಿ ದಾಸ್ತಾನು ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com