ಜಮ್ಮು-ಕಾಶ್ಮೀರ ಹೂಡಿಕೆದಾರರ ಸಮಾವೇಶ 2020 ಕ್ಕೆ ಮುಂದೂಡಿಕೆ! 

ಜಮ್ಮು-ಕಾಶ್ಮೀರದಲ್ಲಿ ಅ.12-14 ವರೆಗೆ ನಡೆಯಬೇಕಿದ್ದ ಹೂಡಿಕೆದಾರರ ಸಮಾವೇಶವನ್ನು 2020 ಕ್ಕೆ ಮುಂದೂಡಲಾಗಿದೆ. 

Published: 20th September 2019 10:53 AM  |   Last Updated: 20th September 2019 10:53 AM   |  A+A-


J&K Investors' Summit postponed to 2020 after preparedness review

ಜಮ್ಮು-ಕಾಶ್ಮೀರ ಹೂಡಿಕೆದಾರರ ಸಮಾವೇಶ 2020 ಕ್ಕೆ ಮುಂದೂಡಿಕೆ!

Posted By : Srinivas Rao BV
Source : PTI

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಅ.12-14 ವರೆಗೆ ನಡೆಯಬೇಕಿದ್ದ ಹೂಡಿಕೆದಾರರ ಸಮಾವೇಶವನ್ನು 2020 ಕ್ಕೆ ಮುಂದೂಡಲಾಗಿದೆ. 

ರಾಜ್ಯಪಾಲ ಸತ್ಯಪಾಲ್ ಮಲೀಕ್ ನೇತೃತ್ವದಲ್ಲಿ ನಡೆದ ರಾಜ್ಯ ಆಡಳಿತ ಮಂಡಳಿ (ಎಸ್ಎಸಿ) ಸಭೆಯಲ್ಲಿ ಹೂಡಿಕೆದಾರರ ಸಮಾವೇಶವನ್ನು ಮುಂದೂಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಹೂಡಿಕೆದಾರರ ಸಮಾವೇಶದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಸಿದ್ಧತೆಯ ಹಂತವನ್ನು ನೋಡಿ ಹೂಡಿಕೆದಾರರ ಸಮಾವೇಶವನ್ನು ಮುಂದೂಡಲಾಗಿದೆ. 

ಮುಂದಿನ ದಿನಾಂಕವನ್ನು ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ನಿಗದಿಪಡಿಸಲಾಗುತ್ತದೆ. 

ಎಸ್ಎಸಿ ನಿರ್ಣಯದಿಂದ ಶೃಂಗಸಭೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ಕೈಗಾರಿಕೆ ಹಾಗೂ ವಾಣಿಜ್ಯ (ಐ&ಸಿ) ಇಲಾಖೆಗೆ ಮತ್ತಷ್ಟು ಸಮಯ ದೊರೆತಂತಾಗಿದೆ. 
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp