2020ರ ಅಂತ್ಯದ ವೇಳೆಗೆ ತೇಜಸ್ ಯುದ್ಧ ವಿಮಾನದಲ್ಲಿಯೇ ಆಮ್ಲಜನಕ ಪೂರೈಕೆ ವ್ಯವಸ್ಥೆ!

2020ರ ಡಿಸೆಂಬರ್ ವೇಳೆಗೆ ಆನ್ ಬೋರ್ಡ್ ಆಕ್ಸಿಜನ್(OBOX) ಉತ್ಪಾದಿಸುವ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಭಾರತದ ಹಗುರ ಯುದ್ಧ ವಿಮಾನ(ಎಲ್ ಸಿಎ) ತೇಜಸ್ ಆಧುನೀಕರಣಗೊಳ್ಳಲಿದೆ. 
ನಿನ್ನೆ ಬೆಂಗಳೂರಿನ ಹೆಚ್ ಎಎಲ್ ನಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಹೊತ್ತೊಯ್ದ ತೇಜಸ್ ಯುದ್ಧ ವಿಮಾನ
ನಿನ್ನೆ ಬೆಂಗಳೂರಿನ ಹೆಚ್ ಎಎಲ್ ನಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಹೊತ್ತೊಯ್ದ ತೇಜಸ್ ಯುದ್ಧ ವಿಮಾನ

ಬೆಂಗಳೂರು; 2020ರ ಡಿಸೆಂಬರ್ ವೇಳೆಗೆ ಆನ್ ಬೋರ್ಡ್ ಆಕ್ಸಿಜನ್(OBOX) ಉತ್ಪಾದಿಸುವ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಭಾರತದ ಹಗುರ ಯುದ್ಧ ವಿಮಾನ(ಎಲ್ ಸಿಎ) ತೇಜಸ್ ಆಧುನೀಕರಣಗೊಳ್ಳಲಿದೆ.


ವಿಮಾನದಲ್ಲಿ ದೀರ್ಘಾವಧಿಯವರೆಗೆ ವಾಯು ಇರುವಂತೆ ಮಾಡಿಕೊಡುವ ನಂತರ ಭಾರತೀಯ ವಾಯುಪಡೆಯ ಎಲ್ ಸಿಎ ಮಾರ್ಕ್-1(ಎಂಕೆ1) ಅಭಿವೃದ್ಧಿಪಡಿಸಿದ ನಂತರ ತೇಜಸ್‌ನ ಮಧ್ಯ-ಗಾಳಿಯ ಇಂಧನವನ್ನು ಯಶಸ್ವಿಯಾಗಿ ತುಂಬಿಸುವ ಕಾರ್ಯ ಮಾಡುತ್ತಿದೆ. ಡಿಫೆನ್ಸ್ ಎಲೆಕ್ಟ್ರೊಮೆಡಿಕಲ್ ಅಂಡ್ ಬಯೊ ಎಂಜಿನಿಯರಿಂಗ್ ಲ್ಯಾಬೊರೇಟರಿ(ಡಿಇಬಿಇಎಲ್) ವಿಜ್ಞಾನಿಗಳು ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ(ಡಿಆರ್ ಡಿಒ)ದಡಿಯಲ್ಲಿ ಆನ್ ಬೋರ್ಡ್ ಆಕ್ಸಿಜನ್ ಉತ್ಪಾದಿಸುವ ವ್ಯವಸ್ಥೆ(OBOX)ನ್ನು ಅಭಿವೃದ್ಧಿಪಡಿಸಿದ್ದಾರೆ. ದೀರ್ಘಾವಧಿ ಪ್ರಯಾಣದವರೆಗೆ ವಿಮಾನ ಹೆಚ್ಚು ಎತ್ತರದಲ್ಲಿ ಹಾರಾಡುವಾಗ ನಿರಂತರವಾಗಿ ಆಮ್ಲಜನಕವನ್ನು ಪೂರೈಸುತ್ತಾ ವಿಮಾನದ ಪೈಲಟ್ ಗಳು ಸದೃಢವಾಗಿರುವಂತೆ ಮತ್ತು ಜಾಗ್ರತೆಯಿಂದ ಇರುವಂತೆ ಇದು ನೋಡಿಕೊಳ್ಳುತ್ತದೆ.


ಪ್ರಸ್ತುತ ತೇಜಸ್ ಹಗುರ ಯುದ್ಧ ವಿಮಾನ ಹಾರಾಟದ ಸಂದರ್ಭಗಳಲ್ಲಿ ಪೈಲಟ್ ಜೊತೆಗೆ ಆಕ್ಸಿಜನ್ ನ ಬಾಟಲ್, ಸಿಲಿಂಡರ್ ಇರುತ್ತದೆ, ಅದು ಗರಿಷ್ಠವೆಂದರೆ ಹಾರಾಟ ಆರಂಭಿಸಿ ಒಂದು ಗಂಟೆಯವರೆಗೆ ಸಾಕಾಗುತ್ತದೆ, ಮುಗಿಯುತ್ತಾ ಬಂದಾಗ ಮತ್ತೆ ಮೂಲ ಸ್ಥಾನಕ್ಕೆ ಬಂದು ಆಕ್ಸಿಜನ್ ಮತ್ತು ಸಿಲೆಂಡರ್ ನ್ನು ತುಂಬಿಸಿಕೊಳ್ಳಬೇಕು. ಅತ್ಯಾಧುನಿಕ OBOX ವ್ಯವಸ್ಥೆ ಅಳವಡಿಕೆಯಾದರೆ ವಿಮಾನದ ಎಂಜಿನ್ ಚಾಲನೆ ಇರುವವರೆಗೂ ವಿಮಾನ ಎಷ್ಟು ದೂರದವರೆಗೆ ಹಾರಾಡುತ್ತಿದ್ದರೂ ಸಹ ಆಮ್ಲಜನಕ ನಿರಂತರವಾಗಿ ಪೂರೈಕೆಯಾಗುತ್ತಿರುತ್ತದೆ.


ಎಲ್ ಸಿಎ ತೇಜಸ್ ದೇಶಿ ನಿರ್ಮಿತ ಹಗುರವಾದ, ಹಲವು ಕಾರ್ಯ ನಿರ್ವಹಿಸುವ ಸೂಪರ್ಸಾನಿಕ್ ವಿಮಾನವಾಗಿದ್ದು, ಇದನ್ನು ಯುದ್ಧ ಮತ್ತು ತರಬೇತಿ ವಿಮಾನಗಳೆರಡರಲ್ಲೂ ಬಳಸಲಾಗುತ್ತದೆ.ಭಾರತೀಯ ವಾಯುಪಡೆ ಆರಂಭ ಹಂತದಲ್ಲಿ 40 ಎಲ್ ಸಿಎ ತೇಜಸ್ ವಿಮಾನ ಉತ್ಪಾದನೆಗೆ ಹೆಚ್ ಎಎಲ್ ನಲ್ಲಿ ಆರ್ಡರ್ ಕೊಟ್ಟಿತ್ತು. ಅರನಾಟಿಕ್ ಡೆವೆಲಪ್ ಮೆಂಟ್ ಏಜೆನ್ಸಿ (ಎಡಿಎ) ತನ್ನ ವಿನ್ಯಾಸ ಮತ್ತು ಅಭಿವೃದ್ಧಿ ಹಂತವನ್ನು ಪೂರ್ಣಗೊಳಿಸಿದ ನಂತರ ಹೆಚ್ ಎಎಲ್ ಗೆ ಮುಂದಿನ ಹಂತದ ಕೆಲಸಕ್ಕೆ ಬರುತ್ತದೆ. ಕಳೆದ ವರ್ಷ ಭಾರತೀಯ ವಾಯುಪಡೆ 83 ಎಲ್ ಸಿಎ ತೇಜಸ್ ವಿಮಾನ ಖರೀದಿಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಡರ್ ಕೊಟ್ಟಿತ್ತು.

ಬಿಡಿ ಭಾಗಗಳ ಕಾರ್ಯನಿಖರತೆಯನ್ನು ಹೆಚ್ಚು ದಕ್ಷಗೊಳಿಸಿ ತೂಕವನ್ನು ಕಡಿಮೆ ಮಾಡಿ ತೇಜಸ್ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com