ಕಾರ್ಪೊರೇಟ್ ತೆರಿಗೆ ಕಡಿತ ಐತಿಹಾಸಿಕ ನಿರ್ಧಾರ, 130 ಕೋಟಿ ಭಾರತೀಯರಿಗೆ ಲಾಭ: ಪ್ರಧಾನಿ ಮೋದಿ ಬಣ್ಣನೆ

ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ತೆರಿಗೆ ಸಂಬಂಧಿತ ಉಪಕ್ರಮಗಳ ಕುರಿತು ಪ್ರತಿಪಕ್ಷಗಳ ಟೀಕೆಗಳನ್ನು ಬದಿಗೊತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಕ್ರಮಗಳು ಮಹತ್ವಾಕಾಂಕ್ಷಿ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ....

Published: 20th September 2019 04:18 PM  |   Last Updated: 20th September 2019 04:20 PM   |  A+A-


PM Modi

ಪ್ರಧಾನಮಂತ್ರಿ ನರೇಂದ್ರ ಮೋದಿ

Posted By : Lingaraj Badiger
Source : UNI

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ತೆರಿಗೆ ಸಂಬಂಧಿತ ಉಪಕ್ರಮಗಳ ಕುರಿತು ಪ್ರತಿಪಕ್ಷಗಳ ಟೀಕೆಗಳನ್ನು ಬದಿಗೊತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಕ್ರಮಗಳು ಮಹತ್ವಾಕಾಂಕ್ಷಿ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಿದ್ದು, ಖಾಸಗಿ ಹೂಡಿಕೆಯನ್ನು ಆಕರ್ಷಿಸಿ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಶುಕ್ರವಾರ ಹೇಳಿದ್ದಾರೆ.

ಸರ್ಕಾರದ ಈ ಕ್ರಮದಿಂದ 130 ಕೋಟಿ ಭಾರತೀಯರಿಗೆ ಪ್ರಯೋಜನವಾಗಲಿದೆ. ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವ ಕ್ರಮ ಐತಿಹಾಸಿಕವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗೋವಾದ ಪಣಜಿಯಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹೊಸ ಉಪಕ್ರಮಗಳನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ಈ ಟ್ವೀಟ್ ಮಾಡಿದ್ದಾರೆ.

ತೆರಿಗೆ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆ 2019 ರ ಅಡಿ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ನಿಬಂಧನೆ ಸೇರಿಸಲಾಗಿದೆ. ಷರತ್ತುಗಳಿಗೆ ಒಳಪಟ್ಟು ಯಾವುದೇ ದೇಶೀಯ ಕಂಪನಿಗೆ ಶೇ.22ರಷ್ಟು ದರದಲ್ಲಿ ಆದಾಯ ತೆರಿಗೆ ಪಾವತಿಸುವ ಆಯ್ಕೆಗೆ ಇದು ಅವಕಾಶ ಮಾಡಿಕೊಡಲಿದೆ.

'ಹೊಸ ಕ್ರಮಗಳು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಉತ್ತಮ ಉತ್ತೇಜನ ನೀಡುತ್ತವೆ. ವಿಶ್ವದೆಲ್ಲೆಡೆಯಿಂದ ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತದೆ. ದೇಶದ ಖಾಸಗಿ ವಲಯದ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದರಿಂದ 130 ಕೋಟಿ ಭಾರತೀಯರಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ.' ಎಂದು ಪ್ರಧಾನಿ ಹೇಳಿದ್ದಾರೆ.

'ಉದ್ಯಮಕ್ಕೆ ಭಾರತವನ್ನು ಉತ್ತಮ ತಾಣವನ್ನಾಗಿಸಲು ಎನ್‌ಡಿಎ ಸರ್ಕಾರದ ಬದ್ಧತೆಯನ್ನು ಕಳೆದ ಕೆಲ ವಾರಗಳಲ್ಲಿ ಆರ್ಥಿಕತೆ ಉತ್ತೇಜನಕ್ಕೆ ತಮ್ಮ ಸರ್ಕಾರ ತೆಗೆದುಕೊಂಡ ಹೊಸ ಕ್ರಮಗಳು ಪ್ರತಿಬಿಂಬಿಸಿವೆ. ತಮ್ಮ ಸರ್ಕಾರದ ಹೊಸ ಉಪಕ್ರಮಗಳು ಸಮಾಜದ ಎಲ್ಲಾ ವರ್ಗದವರಿಗೆ ಅವಕಾಶಗಳನ್ನು ಒದಗಿಸಲಿವೆ. ಅಲ್ಲದೆ, ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಸಮೃದ್ಧಿ ಹೆಚ್ಚಿಸುತ್ತವೆ.' ಎಂದು ಮೋದಿ ಹೇಳಿದ್ದಾರೆ.

ಉತ್ಪಾದನೆಯಲ್ಲಿ ಹೊಸ ಹೂಡಿಕೆ ಆಕರ್ಷಿಸಲು ಮತ್ತು 'ಮೇಕ್-ಇನ್-ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ, ಆದಾಯ ತೆರಿಗೆ ಕಾಯ್ದೆಯಲ್ಲಿ 2019-20ನೇ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ. ಇದರಿಂದ 2019ರ ಅಕ್ಟೋಬರ್ 1ರಂದು ಅಥವಾ ನಂತರ ಸ್ಥಾಪಿತವಾದ ಯಾವುದೇ ಹೊಸ ದೇಶೀಯ ಕಂಪನಿಯು ಉತ್ಪಾದನೆಯಲ್ಲಿ ಹೊಸ ಹೂಡಿಕೆ ಮಾಡಲಿದೆ. ಈ ಕಂಪೆನಿಗಳಿಗೆ ಶೇ.15ರಷ್ಟು ದರದಲ್ಲಿ ಆದಾಯ ತೆರಿಗೆ ಪಾವತಿಸುವ ಆಯ್ಕೆ ನೀಡಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp