ಕಾರ್ಪೊರೇಟ್ ತೆರಿಗೆ ಇಳಿಕೆ ಸ್ವಾಗತಾರ್ಹ, ಆದರೆ ಹೂಡಿಕೆ ಹೆಚ್ಚುವುದು ಸಂಶಯ: ಜೈರಾಮ್ ರಮೇಶ್ 

ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿರುವುದನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಇಂತಹ ಕ್ರಮಗಳಿಂದ ಹೂಡಿಕೆ ಕ್ಷೇತ್ರದಲ್ಲಿ ಪುನಶ್ಚೇತನವುಂಟಾಗುತ್ತದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. 
ಜೈರಾಂ ರಮೇಶ್
ಜೈರಾಂ ರಮೇಶ್

ನವದೆಹಲಿ; ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿರುವುದನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಇಂತಹ ಕ್ರಮಗಳಿಂದ ಹೂಡಿಕೆ ಕ್ಷೇತ್ರದಲ್ಲಿ ಪುನಶ್ಚೇತನವುಂಟಾಗುತ್ತದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕ್ರಮದಿಂದ ಭಾರತ ಸರ್ಕಾರ ಮತ್ತು ಕಾರ್ಪೊರೇಟ್ ವಲಯದಲ್ಲಿ ಕಂಡುಬರುತ್ತಿರುವ ಆತಂಕದ ವಾತಾವರಣ ನಿವಾರಣೆಯಾಗುವುದಿಲ್ಲ ಎಂದಿದ್ದಾರೆ. 


ಎನ್ ಡಿಎ 2 ಸರ್ಕಾರ ಬಂದು ಬಜೆಟ್ ಮಂಡನೆಯಾದ 3 ತಿಂಗಳ ನಂತರ ಮತ್ತು ಮುಂದಿನ ವರ್ಷ ಬಜೆಟ್ ಮಂಡನೆಗೆ ನಾಲ್ಕೈದು ತಿಂಗಳ ಮೊದಲು ಇಂದು ಭಯಪೀಡಿತ ಮೋದಿ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಇಳಿಸಿದೆ. ಇದು ಸ್ವಾಗತಾರ್ಹ ಕ್ರಮವಾದರೂ ಕೂಡ ಇದರಿಂದ ಹೂಡಿಕೆ ಪುನಶ್ಚೇತನವಾಗುತ್ತದೆಯೇ ಎಂದು ನನಗೆ ಸಂಶಯವಿದೆ. ಇದರಿಂದ ಭಾರತದ ಕಾರ್ಪೊರೇಟ್ ವಲಯದಲ್ಲಿ ಸದ್ಯ ಕಂಡುಬರುತ್ತಿರುವ ಆತಂಕದ ಪರಿಸ್ಥಿತಿ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com