ಸಂಚಾರಿ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು 'ಕಾಂಡೋಮ್' ಇಟ್ಟುಕೊಂಡಿರುವ ಕ್ಯಾಬ್ ಡ್ರೈವರ್, ಇದು ನಿಜಾನಾ? ಈ ವರದಿ ಓದಿ!

ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕ್ಯಾಬ್ ಚಾಲಕರು ಆರ್ಸಿ, ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳ ಜೊತೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ.
ಸಂಚಾರಿ ಪೊಲೀಸರು
ಸಂಚಾರಿ ಪೊಲೀಸರು

ನವದೆಹಲಿ: ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕ್ಯಾಬ್ ಚಾಲಕರು ಆರ್ಸಿ, ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳ ಜೊತೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ.

ಹೊಸ ಮೋಟಾರು ಕಾಯ್ದೆಯಿಂದ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ತೆರಬೇಕಾಗಿರುವುದರಿಂದ ಬೈಕ್ ಸವಾರರು, ಕಾರು, ವಾಹನ ಮಾಲೀಕರು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಕೆಲಸಕ್ಕೆ ತೆರಳುತ್ತಿದ್ದಾರೆ. ಈ ಮಧ್ಯೆ  ಕ್ಯಾಬ್ ಚಾಲಕರು ಕಾಂಡೋಮ್ ಗಳನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದಾರೆ.

ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ ವಾಟ್ಯಪ್ ನಲ್ಲಿ ನಾನಾ ಸಂದೇಶಗಳು ಹರಿದಾಡುತ್ತಿದ್ದು, ಸಂಚಾರಿ ನಿಯಮದ ಪ್ರಕಾರ ಕ್ಯಾಬ್ ಚಾಲಕರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟಿಕೊಳ್ಳಬೇಕು ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನು ನಂಬಿದ ಕ್ಯಾಬ್ ಚಾಲಕರು ಕಾರಿನಲ್ಲಿ ಕಾಂಡೋಮ್ ಗಳನ್ನು ಇಟ್ಟುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ.

ದೆಹಲಿ ಪೊಲೀಸರು ಕಾರು ಚಾಲಕ ರಮೇಶ್ ಪಾಲ್ ರನ್ನು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿಷಯ ಹೊರಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com