ನ್ಯಾಯಾಲಯದಲ್ಲಿ ಗೆಲವು ನಮ್ಮ ಪರವಾದರೆ ಚಿನ್ನದಲ್ಲಿ ರಾಮ ಮಂದಿರ ನಿರ್ಮಾಣ: ಹಿಂದು ಮಹಾಸಭಾ

ಅಯೋಧ್ಯೆ ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಪ್ರಕರಣಗಳ ಸಂಬಂಧ ನ್ಯಾಯಾಲಯದಲ್ಲಿ ಗೆಲುವು ನಮ್ಮ ಪರವಾದರೆ, ರಾಮ ಮಂದಿರವನ್ನು ಸ್ವರ್ಣದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ ಎಂದು ಹಿಂದು ಮಹಾಸಭಾ ಗುರುವಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಯೋಧ್ಯೆ ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಪ್ರಕರಣಗಳ ಸಂಬಂಧ ನ್ಯಾಯಾಲಯದಲ್ಲಿ ಗೆಲುವು ನಮ್ಮ ಪರವಾದರೆ, ರಾಮ ಮಂದಿರವನ್ನು ಸ್ವರ್ಣದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ ಎಂದು ಹಿಂದು ಮಹಾಸಭಾ ಗುರುವಾರ ಹೇಳಿದೆ. 

ಅಯೋಧ್ಯೆ ರಾಮ ಮಂದಿರ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿಯವರು, ಹಿಂದು ಮಹಾಸಭಾ ಹಾಗೂ ಹಿಂದುಗಳ ಪರವಾಗಿಯೇ ಇದೇ ನವೆಂಬರ್ ಮೊದಲ ವಾರದಲ್ಲಿ ತೀರ್ಪು ಹೊರಬೀಳಲಿದೆ. ರಾಮ ಮಂದಿರವನ್ನು ಕಲ್ಲು, ಇಟ್ಟಿಗೆಗಳಿಂದ ಅಲ್ಲದೆ, ಸ್ವರ್ಣದಿಂದಲೇ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ. 

ಭಾರತದಲ್ಲಿರುವ ಸನಾತನ ಧರ್ಮ ಹಿಂದುಗಳು ಅಷ್ಟೇ ಅಲ್ಲದೆ, ವಿಶ್ವರದಲ್ಲಿರುವ ಸಾಕಷ್ಟು ಜನರು ಮಂದಿರ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. 

ಅಯೋಧ್ಯೆ ಭೂ ವಿವಾದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಕ್ತಾಯಗೊಳ್ಳಬೇಕಾಗಿದೆ. ಒಂದು ವೇಳೆ ದೂರುದಾರರು ಇಚ್ಛಿಸಿದ್ದಲ್ಲಿ ಮಂದಿರ-ಮಸೀದಿ ವಿವಾದವನ್ನು ಮಧ್ಯಸ್ಥಿಗೆ ಮೂಲಕವೂ ಇತ್ಯರ್ಥಪಡಿಸಿಕೊಳ್ಳಬಹುದು. ಅ.18ರೊಳಗೆ ವಿಚಾರಣೆ ಪೂರ್ಣಗೊಳ್ಳಲೇಬೇಕಾಗಿದೆ. ಒಂದು ವೇಳೆ ದಿನಂಪ್ರತಿ ಒಂದು ಗಂಟೆ ಹೆಚ್ಚು ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂಕೋರ್ಟ್ ಬುಧವಾರವಷ್ಟೇ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com