ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬಾರಿ ಟ್ರಾಫಿಕ್ ದಂಡ ತಪ್ಪಿಸಿಕೊಳ್ಳಲು ಕಾಂಡೋಮ್ ಹೊತ್ತೊಯ್ಯುತ್ತಿದ್ದಾರೆ ಕ್ಯಾಬ್ ಡ್ರೈವರ್ ಗಳು!

ದುಬಾರಿ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕಾರು ಚಾಲಕರು ಕಾರಿನ ಪ್ರಥಮ ಚಿಕಿತ್ಸಾ ಬಾಕ್ಸ್ ನಲ್ಲಿ ಕಾಂಡೋಮ್ ಗಳ ಇಟ್ಟುಕೊಂಡು ಸಾಗುತ್ತಿದ್ದಾರೆ.

ನವದೆಹಲಿ: ದುಬಾರಿ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕಾರು ಚಾಲಕರು ಕಾರಿನ ಪ್ರಥಮ ಚಿಕಿತ್ಸಾ ಬಾಕ್ಸ್ ನಲ್ಲಿ ಕಾಂಡೋಮ್ ಗಳ ಇಟ್ಟುಕೊಂಡು ಸಾಗುತ್ತಿದ್ದಾರೆ.

ಹೌದು.. ಅಚ್ಚರಿಯಾದರೂ ಇದು ನಿಜ. ದುಬಾರಿ ಟ್ರಾಫಿಕ್ ದಂಡ ನಿಯಮ ಎಲ್ಲ ಚಾಲಕರನ್ನು ಬೇಸ್ತು ಬೀಳಿಸಿದ್ದು, ಈ ಕುರಿತ ಸುದ್ದಿಗಳು ಕ್ಯಾಬ್ ಚಾಲಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ದುಬಾರಿ ದಂಡದ ಸುದ್ದಿಗಳಾದರೆ ಮತ್ತೊಂದೆಡೆ ದಿನಕ್ಕೊಂದು ಹೊಸ ನಿಯಮ ಮತ್ತು ಅದಕ್ಕೆ ದುಬಾರಿ ದಂಡದ ಕುರಿತ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಾರಿನ ಪ್ರಥಮ ಚಿಕಿತ್ಸಾ ಬಾಕ್ಸ್ ನಲ್ಲಿ ಕಾಂಡೋಮ್ ಇಲ್ಲವಾದಲ್ಲಿ ಅದಕ್ಕೂ ಸಂಚಾರಿ ಪೊಲೀರು ದಂಡ ವಿಧಿಸುತ್ತಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ದೆಹಲಿಯಲ್ಲಿ ಕ್ಯಾಬ್ ಚಾಲಕರು ಒಂದಲ್ಲ ಎರಡಲ್ಲ ಮೂರು ಮೂರು ಕಾಂಡೋಮ್ ಗಳನ್ನು ಪ್ರಥಮ ಚಿಕಿತ್ಸಾ ಬಾಕ್ಸ್ ನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ.

ಆದರೆ ಈ ಕುರಿತ ಸತ್ಯಾಸತ್ಯತೆ ತಿಳಿಯಲು ದೆಹಲಿ ಟ್ರಾಫಿಕ್ ಕೇಂದ್ರ ಕಚೇರಿಯನ್ನು ಮಾಧ್ಯಮಗಳು ಸಂಪರ್ಕಿಸಿದಾಗ ಇಂತಹ ಯಾವುದೇ ನಿಯಮಗಳಿಲ್ಲ ಎಂದು ತಿಳಿದುಬಂದಿದೆ. ಕಾರಿನಲ್ಲಿ ಕಾಂಡೋಮ್ ಇಟ್ಟುಕೊಳ್ಳಬೇಕು ಎಂಬ ಯಾವುದೇ ನಿಯಮವಿಲ್ಲ. ನಾವು ತಪಾಸಣಾ ಸಮಯದಲ್ಲಿ ಇದರ ಬಗ್ಗೆ ಕೇಳುವುದು ಇಲ್ಲ. ಆದರೆ ಕೆಲ ಎನ್‍ಜಿಒ ಸಂಸ್ಥೆಗಳು ಸುರಕ್ಷಿತ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವಾಗ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡಿರಬೇಕು ಎಂದು ಹೇಳುತ್ತಾರೆ. ಈ ಸುದ್ದಿಯೇ ಗಾಳಿ ಸುದ್ದಿಯಾಗಿ ಹಬ್ಬಿರಬಹುದು ಎಂದು ಹೇಳಿದ್ದಾರೆ.

ಇನ್ನು ಕಾಂಡೋಮ್ ಕುರಿತಂತೆ ಮತ್ತೆ ಕೆಲವು ಚಾಲಕರು ಬೇರೆಯದ್ದೇ ವಾದ ಮಂಡಿಸಿದ್ದು, ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ಎಲ್ಲಾ ಸಮಯದಲ್ಲೂ ಮೂರು ಕಾಂಡೋಮ್‍ಗಳನ್ನು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಏಕೆಂದರೆ ಒಬ್ಬ ವ್ಯಕ್ತಿಗೆ ಗಾಯವಾಗಿ ರಕ್ತಸ್ರಾವವಾದರೆ ರಕ್ತ ಬಾರದಂತೆ ಕಟ್ಟಲು ಕಾಂಡೋಮ್ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಮೂಳೆ ಮುರಿದು ಹೋದರೆ ಅವರು ಆಸ್ಪತ್ರೆ ತಲುಪುವವರೆಗೆ ಆ ಪ್ರದೇಶದ ಸುತ್ತಲೂ ಕಾಂಡೋಮ್ ಅನ್ನು ಕಟ್ಟಬಹುದು. ಈ ಎಲ್ಲಾ ಕಾರಣದಿಂದ ಕಾಂಡೋಮ್ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ದೆಹಲಿಯ ಸರ್ವೋದಯ ಚಾಲಕ ಸಂಘದ ಅಧ್ಯಕ್ಷ ಕಮಲ್ಜೀತ್ ಗಿಲ್ ಹೇಳಿದ್ದಾರೆ.

ಒಟ್ಟಾರೆ ದುಬಾರಿ ಟ್ರಾಫಿಕ್ ದಂಡದ ಕುರಿತಂತೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದ್ದು, ಚಾಲಕರನ್ನು ಬೇಸ್ತು ಬೀಳಿಸುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com