ರಾಜ್ಯ ಉಪಸಮರಕ್ಕೆ ಡೇಟ್ ಫಿಕ್ಸ್: ಅಕ್ಟೋಬರ್ 21ಕ್ಕೆ ಮಹಾರಾಷ್ಟ್ರ-ಹರ್ಯಾಣ ವಿಧಾನಸಭೆ ಚುನಾವಣೆ

ಭಾರತೀಯ ಚುನಾವಣಾ ಆಯೋಗ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳ ಚುನಾವಣೆ ಜೊತೆಗೆ ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೂ ಡೇಟ್ ಫಿಕ್ಸ್ ಮಾಡಿದೆ.

Published: 21st September 2019 12:51 PM  |   Last Updated: 21st September 2019 01:06 PM   |  A+A-


Indian Election Commission

ಭಾರತೀಯ ಚುನಾವಣಾ ಆಯೋಗ

Posted By : Shilpa D
Source : Online Desk

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳ  ಚುನಾವಣೆ  ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೂ ಡೇಟ್ ಫಿಕ್ಸ್ ಮಾಡಿದೆ.

ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಅಕ್ಟೋಬರ್ 21 ರಂದು ಮತದಾನ ನಡೆಯಲಿದೆ,  ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ, ಇನ್ನು 2 ಕ್ಷೇತ್ರಗಳಿಗೆ  ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಕಾರಣ 2 ಕ್ಷೇತ್ರಗಳಿಗೆ ಮತದಾನ ದಿನಾಂಕ ಗೊತ್ತು ಮಾಡಿಲ್ಲ.

ರಾಜ್ಯದ ಉಪ ಸಮರಕ್ಕೆ ದಿನಾಂಕ ನಿಗದಿಯಾಗಿರುವುದರ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಸೆಪ್ಟಂಬರ್ 23ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಕ್ಟೋಬರ್ 4ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಇನ್ನೂ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಿಗೂ ದಿನಾಂಕ ಘೋಷಣೆ ಮಾಡಲಾಗಿದ್ದು ಅಕ್ಟೋಬರ್ 21 ರಂದು ಮತದಾನ ನಡೆಯಲಿದೆ, ಅಕ್ಟೋಬರ್ 24 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ  ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಆರ್ ಆರ್ ನಗರ (ಮುನಿರತ್ನ ಕ್ಷೇತ್ರ) ಮತ್ತು ಮಸ್ಕಿ(ಪ್ರತಾಪ್ ಗೌಡ)ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಇಂದಿನಿಂದಲೇ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದೆ.

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು:
1)ಗೋಕಾಕ್
2)ಅಥಣಿ
3)ಕಾಗವಾಡ
4)ಹಿರೆಕೆರೂರು
5)ಯಲ್ಲಾಪುರ
6)ಯಶವಂತಪುರ್
7)ವಿಜಯನಗರ
8)ಶಿವಾಜಿನಗರ
9)ಹೊಸಕೋಟೆ
10)ಹುಣಸೂರು
11)ಕೆಆರ್ ಪೇಟೆ
12)ಮಹಾಲಕ್ಷ್ಮಿ ಲೇಔಟ್
13)ಕೆಆರ್ ಪುರ
14)ರಾಣೇಬೆನ್ನೂರು
15)ಚಿಕ್ಕಬಳ್ಳಾಪುರ
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp