ರೈತರ ಮತ್ತೊಂದು ಮೆಗಾ ರ್ಯಾಲಿಗೆ ವೇದಿಕೆಯಾಗಲಿರುವ ರಾಜಧಾನಿ; 15 ಸಾವಿರ ರೈತರಿಂದ ಪ್ರತಿಭಟನೆ

ರಾಷ್ಟ್ರರಾಜಧಾನಿ ದೆಹಲಿ ರೈತರ ಮತ್ತೊಂದು ಮೆಗಾ ರ್ಯಾಲಿಗೆ ವೇದಿಕೆಯಾಗಲಿದ್ದು, ಬರೊಬ್ಬರಿ 15 ಸಾವಿರಕ್ಕೂ ಅಧಿಕ ರೈತರು ದೆಹಲಿ ಪ್ರವೇಶ ಮಾಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೆಹಲಿಯಾಧ್ಯಂತ ಭಾರಿ ಪೊಲೀಸ್ ಬಂದೋಬಸ್ತ್, ಉತ್ತರ ಪ್ರದೇಶದಿಂದ ಆರಂಭವಾಗಿದೆ ರೈತರ ಮೆಗಾ ರ್ಯಾಲಿ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ರೈತರ ಮತ್ತೊಂದು ಮೆಗಾ ರ್ಯಾಲಿಗೆ ವೇದಿಕೆಯಾಗಲಿದ್ದು, ಬರೊಬ್ಬರಿ 15 ಸಾವಿರಕ್ಕೂ ಅಧಿಕ ರೈತರು ದೆಹಲಿ ಪ್ರವೇಶ ಮಾಡಲಿದ್ದಾರೆ.

ಹೌದು.. ವಿವಿಧ ಬೇಡಿಕಗೆಳ ಈಡೇರಿಕೆಗೆ ಆಗ್ರಹಿಸಿ ರೈತರು ಮೆಗಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸೆಪ್ಟೆಂಬರ್ 17ರಂದು ಉತ್ತರ ಪ್ರದೇಶದ ಸಹರಣ್ ಪುರದಲ್ಲಿ ರೈತರ ಮೆಗಾ ರ್ಯಾಲಿ ಆರಂಭವಾಗಿದ್ದು, ಇಂದು ದೆಹಲಿಗೆ ಪ್ರವೇಶ ಮಾಡಲಿದ್ದಾರೆ. ಭಾರತ್ ಕಿಸಾನ್ ಯೂನಿಯನ್ ಒಕ್ಕೂಟದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಪ್ರಮುಖವಾಗಿ ಕಬ್ಬು ಬೆಳಗಾರರ ಬಾಕಿ ಪಾವತಿ, ಬೇಷರತ್ ಸಾಲ ಮನ್ನಾ, ಉತ್ತರ ಪ್ರದೇಶದ ಗಂಗಾ ತಟದ ಸ್ವಚ್ಛತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ನೋಯ್ಡಾ ಪ್ರವೇಶ ಮಾಡಿದ್ದ ರೈತರು ಇದೀಗ ದೆಹಲಿ ಪ್ರವೇಶಕ್ಕೆ ಕಾದು ನಿಂತಿದ್ದಾರೆ. ದೆಹಲಿಯಲ್ಲಿ ಬೃಹತ್ ರ್ಯಾಲಿ ಬಳಿಕ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನುಸಲ್ಲಿಸಲಿದ್ದಾರೆ.

ರೈತರ ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಕಿಸಾನ್ ಘಾಟ್ ಗೆ ರೈತರ ರ್ಯಾಲಿ ಆಗಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com