ಪ್ರಧಾನಿ ಈ ರೀತಿ ಮಾತನಾಡಬೇಕೆ?-ಪಾಕಿಸ್ತಾನವನ್ನು 'ಇಷ್ಟಪಡುವ' ಮೋದಿ ಹೇಳಿಕೆಗೆ ಪವಾರ್ ತಿರುಗೇಟು

ಶರದ್ ಪವಾರ್ ಪಾಕಿಸ್ತಾನವನ್ನು "ಇಷ್ಟಪಡುತ್ತಿದ್ದಾರೆ" ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸಂಬಂಧ ಕಿಡಿ ಕಾರಿರುವ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸತ್ಯಾಸತ್ಯತೆ ತಿಳಿಯದೆ ಮಾತನಾಡುವುದು ಪ್ರಧಾನ ಮಂತ್ರಿಗಳಿಗೆ ಶೋಭಿಸುವುದಿಲ್ಲ ಎಂದಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಅಹಮದ್ ನಗರ್: ಶರದ್ ಪವಾರ್ ಪಾಕಿಸ್ತಾನವನ್ನು "ಇಷ್ಟಪಡುತ್ತಿದ್ದಾರೆ" ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸಂಬಂಧ ಕಿಡಿ ಕಾರಿರುವ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸತ್ಯಾಸತ್ಯತೆ ತಿಳಿಯದೆ ಮಾತನಾಡುವುದು ಪ್ರಧಾನ ಮಂತ್ರಿಗಳಿಗೆ ಶೋಭಿಸುವುದಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ಚುನಾವಣೆಗೆ ಮುನ್ನ ಗುರುವಾರ ನಾಸಿಕ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು  ಭಾರತದ ವಿರುದ್ಧ 'ಇತರ ದೇಶಗಳು' ಬಳಸುತ್ತಿವೆ ಎಂದು ಆರೋಪಿಸಿದ್ದರು.

"ಕಾಂಗ್ರೆಸ್ ನ ಗೊಂದಲವನ್ನು ನಾನು ಅರ್ಥೈಸಿಕೊಳ್ಳಬಲ್ಲೆ ಆದರೆ ಶರದ್ ಪವಾರ್? ಅವರಂತಹ ಅನುಭವಿ ನಾಯಕ ಮತಗಳಿಗಾಗಿ ತಪ್ಪು ಹೇಳಿಕೆ ನೀಡಿದಾಗ ನನಗೆ ಕೆಟ್ಟದೆನಿಸುತ್ತದೆ.ಅವರು ನೆರೆರಾಷ್ಟ್ರವನ್ನು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಜಗತ್ತಿನ ಭಯೋತ್ಪಾದಕರೆಲ್ಲಾತಯಾರಾಗುವುದೆಲ್ಲಿಂದ ಎನ್ನುವುದು  ಎಲ್ಲರಿಗೂ ತಿಳಿದಿದೆ" ಎಂದು ಮೋದಿ ಹೇಳಿದ್ದಾರೆ .

ಇದೀಗ ಪವಾರ್ ಶನಿವಾರ ಮಹಾರಾಷ್ಟ್ರದ ಅಹಮದ್ ನಗರದಲ್ಲಿ  ಮಾತನಾಡಿ ಪಾಕಿಸ್ತಾನದಲ್ಲಿ ಪಾಕಿಸ್ತಾನದಲ್ಲಿ ಆಡಳಿತ ಹಾಗೂ ಸೇನೆ ಭಾರತದ ವಿರುದ್ಧ ಕೆಟ್ಟದಾಗಿ ಮಾತಣಾಡುತ್ತಿದೆ ಎಂದಿದ್ದಾರೆ. "ಈ ನೀತಿಯು ಪಾಕಿಸ್ತಾನದ ಸಾಮಾನ್ಯ ಜನರ ಹಿತದೃಷ್ಟಿಯಿಂದಲ್ಲ, ಆದರೆ ಅದು ಆ ದೇಶದ ಆಡಳಿತಗಾರರ ಹಿತಾಸಕ್ತಿಗೆ ಪೂರಕವಾಗಿದೆ ... ನಾನು ಇದನ್ನು ಹೇಳಿದ್ದೆ. . ಇದು ಪಾಕಿಸ್ತಾನಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತದೆಯೆ? ಇದಕ್ಕಾಗಿ ಪ್ರಧಾನಿಗಳು ನನ್ನ ಹೇಳಿಕೆ ಬಗ್ಗೆ ಹೀಗೆ ಮಾತನಾಡಬೇಕೆ?" ಅವರು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ದಿನಾಂಕ ನಿಗದಿ ಪಡಿಸಿ ಇಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಈ ಹಿನ್ನೆಲೆ ಎನ್‌ಸಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತಣಾಡಿ  ಬಿಜೆಪಿ ಮತ್ತು ಶಿವಸೇನೆ ಸರ್ಕಾರವನ್ನು ಕಿತ್ತೊಗೆಯುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com