ಟ್ರಂಪ್ ಪರ ಮೋದಿ ಚುನಾವಣಾ ಪ್ರಚಾರ: ಕಾಂಗ್ರೆಸ್ ಆರೋಪ

ಹ್ಯೂಸ್ಟನ್  ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ಮೂಲಕ ಭಾರತೀಯ ವಿದೇಶಾಂಗ ನೀತಿಯ ತತ್ತ್ವ ಆದರ್ಶಗಳನ್ನು  ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
ಮೋದಿ-ಟ್ರಂಪ್
ಮೋದಿ-ಟ್ರಂಪ್

ನವದೆಹಲಿ: ಹ್ಯೂಸ್ಟನ್  ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ಮೂಲಕ ಭಾರತೀಯ ವಿದೇಶಾಂಗ ನೀತಿಯ ತತ್ತ್ವ ಆದರ್ಶಗಳನ್ನು  ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್ ಹಿರಿಯ ವಕ್ತಾರ ಆನಂದ್ ಶರ್ಮಾ, ಭಾರತದ ಪ್ರಧಾನಿಯಾಗಿ ಮೋದಿ ಅಮೆರಿಕಾದಲ್ಲಿದ್ದಾರೆ. ಆದರೆ, ಅಮೆರಿಕಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಅಲ್ಲ ಎಂದಿದ್ದಾರೆ.

ಬೇರೊಂದು ದೇಶದ ಚುನಾವಣೆಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎನ್ನುವ ಭಾರತೀಯ ವಿದೇಶಾಂಗ ನೀತಿಯ ತತ್ತ್ವಆದರ್ಶಗಳನ್ನು ಪ್ರಧಾನಿ ಮೋದಿ ಉಲ್ಲಂಘಿಸಿದ್ದಾರೆ ಎಂದು ಟೆಕ್ಸಾಸ್ ನಲ್ಲಿ ನಡೆದ ಹೌಡಿ- ಮೋದಿ ಕಾರ್ಯಕ್ರಮದ ಬಳಿಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ. 

ಭಾರತ ಹಾಗೂ ಅಮೆರಿಕಾ ಎರಡು ಪ್ರಜಾಸತಾತ್ಮಕ ರಾಷ್ಟ್ರವಾಗಿದ್ದು, ಟ್ರಂಪ್ ಪರ ಮೋದಿ ಪ್ರಚಾರ ನಡೆಸುವ ಮೂಲಕ ಉಭಯ ದೇಶಗಳ ಸೌರ್ವಭೌಮ ಹಾಗೂ ಪ್ರಜಾಸತಾತ್ಮಕ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿರುವ ನರೇಂದ್ರ ಮೋದಿ ವಿರುದ್ಧ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ  ಚಿದಂಬರಂ ಕೂಡಾ ವಾಗ್ದಾಳಿ ನಡೆಸಿದ್ದಾರೆ.  ನಿರುದ್ಯೋಗ, ಉದ್ಯೋಗ ಕೊರತೆ, ಕಡಿಮೆ ವೇತನ, ಗುಂಪು ಹಲ್ಲೆ, ಕಾಶ್ಮೀರದಲ್ಲಿ ನಿರ್ಬಂಧ , ಪ್ರತಿಪಕ್ಷ ನಾಯಕರಿಗೆ ಜೈಲು ಹೊರತುಪಡಿಸಿದಂತೆ ಉಳಿದೆಲ್ಲವೂ ಭಾರತದಲ್ಲಿ ಚೆನ್ನಾಗಿದೆ ಎಂದು ಚಿದಂಬರಂ ತಮ್ಮ ಕುಟುಂಬದವರಿಂದ ಟ್ವೀಟ್ ಮಾಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com