ರೈತರ ಆದಾಯ ದ್ವಿಗುಣ ಯೋಜನೆ ಗಂಭೀರವಾದದ್ದೇ? ಇಲ್ಲ, 2015 ರಿಂದ ಈ ಕುರಿತು ನೀತಿ ಆಯೋಗದ ಸಭೆಯೇ ನಡೆದಿಲ್ಲ! 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸಹ ಒಂದು. ಆದರೆ ಈ ಯೋಜನೆಯ ಬಗ್ಗೆ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

2022 ರ ವೇಳೆಗೆ ರೈತರ ಅದಾಯ ದ್ವಿಗುಣಗೊಳಿಸುವುದು ನಮ್ಮ ಸರ್ಕಾರದ ಗುರಿ ಎಂದು ಮೋದಿ ಸರ್ಕಾರವೇನೋ ಹೇಳಿದೆ. ಆದರೆ ನೀತಿ ಆಯೋಗ 2015 ರಿಂದ ಈ ಕುರಿತಾಗಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ! 

ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನೀತಿ ಆಯೋಗ ಈ ವರೆಗೂ ಮಾಡಿರುವುದೇನು ಎಂದು ಕೇಳಿದರೆ ರೈತರ ಆದಾಯ ದ್ವಿಗುಣ: ಕಾರ್ಯತಂತ್ರ, ಕಾರ್ಯಸೂಚಿ ಎಂಬ ಪಾಲಿಸಿ ಪೇಪರ್ ನ್ನು ಹೊರತಂದಿರುವುದಷ್ಟೆ.

2017 ರ ಮಾರ್ಚ್ ತಿಂಗಳಲ್ಲಿ ಈ ಪಾಲಿಸಿ ಪೇಪರ್ ನ್ನು ನೀತಿ ಆಯೋಗ ಪ್ರಧಾನಿ ಮೋದಿ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯಪಾಲರ ಸಭೆಯಲ್ಲಿ ಪ್ರಕಟಿಸಿದೆ. 

ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ  ಸಲ್ಲಿಸಲಾಗಿದ್ದ ಆರ್ ಟಿಐ ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, 2015 ರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ನೀತಿ ಆಯೋಗ ಯಾವುದೇ ಸಭೆಯನ್ನೂ ನಡೆಸಿಲ್ಲ ಎಂದು ಹೇಳಿದೆ. 

ನೀತಿ ಆಯೋಗ ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿ 2015-16 ಬೇಸ್ ಇಯರ್ ನಲ್ಲಿ ರೈತರ ವಾರ್ಷಿಕ ಸರಾಸರಿ ಆದಾಯ 96,703 ರೂಪಾಯಿ ಇತ್ತು ಎಂದು ಹೇಳಿದೆ. ಗುರಿ ಮುಟ್ಟಬೇಕಾದರೆ 2022-23 ರ ವೇಳೆಗೆ ರೈತರ ವಾರ್ಷಿಕ ಆದಾಯ 1,72,694 (2015-16 ರ ಆದಾಯಕ್ಕೆ ಅನುಗುಣವಾಗಿ) ರೂಪಾಯಿ ಅಥವಾ 2,43,998 ರೂಪಾಯಿ ಆಗಿರಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com