3 ಪತ್ನಿಯರು, 15 ಮಕ್ಕಳು, ಮಕ್ಕಳ ಹೆಸರು ನೆನಪಿಲ್ಲ, ಆದರೆ ಇನ್ನೂ ಮಕ್ಕಳು ಬೇಕಂತೆ!

ಜನಸಂಖ್ಯೆ ಸ್ಫೋಟದ ಕುರಿತು ದೇಶ ಚಿಂತಿಸುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಉತ್ತರಪ್ರದೇಶದ ಮೊಹಮ್ಮದ್ ಶರೀಫ್ ಗೆ ಮಾತ್ರ ಇದರ ಬಗ್ಗೆ ಚಿಂತೆಯೇ ಇಲ್ಲ. 3 ಪತ್ನಿಯರು, 15 ಮಕ್ಕಳನ್ನು ಹೊಂದಿರುವ ಆತನಿಗೆ ಅವರ ಹೆಸರುಗಳೇ ಗೊತ್ತಿಲ್ಲ. ಆದರೂ ಇನ್ನೂ ಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾನೆ.

Published: 23rd September 2019 06:17 PM  |   Last Updated: 23rd September 2019 06:17 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : IANS

ಲಕ್ಮೀಪುರ್(ಉತ್ತರಪ್ರದೇಶ): ಜನಸಂಖ್ಯೆ ಸ್ಫೋಟದ ಕುರಿತು ದೇಶ ಚಿಂತಿಸುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಉತ್ತರಪ್ರದೇಶದ ಮೊಹಮ್ಮದ್ ಶರೀಫ್ ಗೆ ಮಾತ್ರ ಇದರ ಬಗ್ಗೆ ಚಿಂತೆಯೇ ಇಲ್ಲ. 3 ಪತ್ನಿಯರು, 15 ಮಕ್ಕಳನ್ನು ಹೊಂದಿರುವ ಆತನಿಗೆ ಅವರ ಹೆಸರುಗಳೇ ಗೊತ್ತಿಲ್ಲ. ಆದರೂ ಇನ್ನೂ ಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾನೆ.

1987ರಲ್ಲಿ ಮೊಹಮ್ಮದ್ ಶರೀಫ್ 14 ವರ್ಷದವನಿದ್ದಾಗಲೇ ಜಟ್ಟ ಬೇಗಂ ಜೊತೆ ಮೊದಲ ಮದುವೆಯಾಯಿತು. ಮೊದಲ ಪತ್ನಿಗೆ ಮೂರು ಗಂಡು ಮಕ್ಕಳು ಮತ್ತು ಐವರು ಪುತ್ರಿಯರಿದ್ದಾರೆ. ನಂತರ 19 ವರ್ಷಕ್ಕೆ ನೂರ್ ಎಂಬುವರನ್ನು ಮದುವೆಯಾಗಿ ಆಕೆಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನಿದ್ದಾನೆ. 2000ರಲ್ಲಿ ಮೂರನೇ ಮದುವೆಯಾದೇ ಆಕೆಗೆ ಒಂದು ಗಂಡು ಮತ್ತು ಒಂದು ಮಗಳಿದ್ದಾಳೆ ಹೀಗೆ 14 ಮಕ್ಕಳ ತಂದೆಯಾಗಿರುವ ಶರೀಫ್ ಗೆ ಇನ್ನು ಮಕ್ಕಳು ಬೇಕಂತೆ.

ಕೃಷಿಕನಾಗಿರುವ ಶರೀಫ್ ಗೆ 24 ವರ್ಷದ ದೊಡ್ಡ ಮಗನಿದ್ದಾನೆ. ಇನ್ನು ಕೊನೆಯ ಮಗಳಿಗೆ 2 ವರ್ಷವಾಗಿದೆ. ಇತ್ತೀಚೆಗಷ್ಟೇ ಪ್ರಧಾನ್ ಮಂತ್ರಿ ಆವಾಜ್ ಯೋಜನೆ ಮೂಲಕ ಮೂರು ಮನೆಗೆ ಅರ್ಜಿ ಹಾಕಿದ್ದು ಈತನ ಪುರಾಣ ಬೆಳಕಿಗೆ ಬಂದಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp