ಶಸ್ತ್ರಾಸ್ತ್ರ, ಮದ್ದುಗುಂಡು ಬೀಳಿಸುತ್ತಿರುವ ಪಾಕ್ ಡ್ರೋಣ್: ಅಗತ್ಯ ಕ್ರಮಕ್ಕೆ ಅಮಿತ್ ಶಾಗೆ ಪಂಜಾಬ್ ಸಿಎಂ ಮನವಿ

ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನ ಡ್ರೋಣ್ ಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒತ್ತಾಯಿಸಿದ್ದಾರೆ.
ಪಾಕ್ ಡ್ರೋಣ್
ಪಾಕ್ ಡ್ರೋಣ್

ನವದೆಹಲಿ: ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನ ಡ್ರೋಣ್ ಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ(ಆರ್ಟಿಕಲ್ 370) ರದ್ದು ಪಡಿಸಿದ ನಂತರ ಪಾಕಿಸ್ತಾನದ ಡ್ರೋಣ್ ಗಳು ಅನಗತ್ಯ ಉಪದ್ರವದಲ್ಲಿ ತೊಡಗಿವೆ. ಇನ್ನು ಪಂಜಾಬ್ ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿವೆ. ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ನಿವಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಮಿತ್ ಶಾರಿಗೆ ಅಮರೀಂದರ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

ಪಂಜಾಬ್ ಪೊಲೀಸರು ರಾಜ್ಯದಲ್ಲಿ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮತ್ತು ಜರ್ಮನಿ ಮೂಲದ ಭಯೋತ್ಪಾದಕ ಗುಂಪಿನ ಬೆಂಬಲದೊಂದಿಗೆ ಪುನಶ್ಚೇತನಗೊಂಡ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ(ಕೆಜೆಡ್‌ಎಫ್) ಭಯೋತ್ಪಾದಕ ವಿಭಾಗವನ್ನು ಭೇದಿಸಿದ ಎರಡು ದಿನಗಳ ನಂತರ ಪಂಜಾಬ್ ಮುಖ್ಯಮಂತ್ರಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com