ಹನಿಟ್ರ್ಯಾಪ್: ಬಲವಂತವಾಗಿ 24 ಕಾಲೇಜು ಯುವತಿಯರು ವಿಐಪಿಗಳ ಮಂಚಕ್ಕೆ, ಎಸ್ ಐಟಿ ಮುಂದೆ ಕಿಂಗ್ ಪಿನ್ ಹೇಳಿಕೆ

ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್  ಹಗರಣದಲ್ಲಿ 8 ಮಾಜಿ ಸಚಿವರು ಹಾಗೂ 12 ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. 
ಆರೋಪಿ ಶ್ವೇತಾ ಜೈನ್
ಆರೋಪಿ ಶ್ವೇತಾ ಜೈನ್

ಇಂದೋರ್: ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್  ಹಗರಣದಲ್ಲಿ 8 ಮಾಜಿ ಸಚಿವರು ಹಾಗೂ 12 ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. 

ಬಡ ಮಧ್ಯಮ ವರ್ಗದ ಸುಮಾರು ಎರಡು ಡಜನ್ ಯುವತಿಯರನ್ನು ಮಧ್ಯ ಪ್ರದೇಶ ಸರ್ಕಾರದ ವಿಐಪಿಗಳಿಗೆ ಸುಖ ನೀಡಲು ಬಲವಂತವಾಗಿ ಕಳುಹಿಸಲಾಗಿತ್ತು ಎಂದು ಕಿಂಗ್ ಪಿನ್ ಶ್ವೇತಾ ಜೈನ್ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ವಿಐಪಿಗಳಿಂದ ಕೋಟ್ಯಾಂತರ ರೂಪಾಯಿ ಮೊತ್ತದ ಲಾಭದಾಯಕ  ಸರ್ಕಾರಿ ಗುತ್ತಿಗೆಗಳನ್ನು ಪಡೆದುಕೊಳ್ಳಲು ಈ ರೀತಿಯಲ್ಲಿ ಮಾಡುತ್ತಿದ್ದಾಗಿ ಶ್ವೇತಾ ಜೈನ್ ಒಪ್ಪಿಕೊಂಡಿದ್ದಾಳೆ. ಕಮಿಷನ್ ಆಧಾರದ ಮೇಲೆ ಮಾನ್ಯತೆ ಪಡೆದ ಕಂಪನಿಗಳಿಗೆ ಶ್ವೇತಾ ಜೈನ್ ಹಾಗೂ ಆಕೆಯ ಆಪ್ತೆ ಆರತಿ ದಯಾಳ್ ಗುತ್ತಿಗೆ ಕೊಡಿಸುತ್ತಿದ್ದಾಗಿ ಆಕೆ ಹೇಳಿದ್ದಾಳೆ. 

ವಿಐಪಿಗಳ ಮೂಲಕ ಗುತ್ತಿಗೆ ಮಾತ್ರವಲ್ಲದೆ, ಉನ್ನತ ಹುದ್ದೆಗಳಿಗೆ ಅನೇಕ ಐಎಸ್, ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ.ಅಧಿಕಾರಿಗಳು ಯುವತಿಯರ ಬೇಡಿಕೆ ಇಟ್ಟಾಗ ಯುವತಿಯರಿಗೆ ಹಣದ ಆಮಿಷವೊಡ್ಡಿ ಕಳುಹಿಸಲಾಗುತಿತ್ತು ಎಂಬ ಸತ್ಯವನ್ನು ಆಕೆ ಎಸ್ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಮೋನಿಕಾ ಎಂಬ ಯುವತಿಗೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರವೇಶ ಕಲ್ಪಿಸಲು ಮೂವರು ಕಾರ್ಯದರ್ಶಿಗಳ ಮಟ್ಟದ ಐಎಎಸ್ ಅಧಿಕಾರಿಗಳ ಬಳಿ ಶ್ವೇತಾ ಜೈನ್ ಪರಿಚಯ ಮಾಡಿಸಿದ್ದಳು. ಅಲ್ಲದೇ ಮೊನಿಕಾ ಇಂದೋರು ಮತ್ತು ಭೂಪಾಲ್ ನಡುವೆ ಓಡಾಡಲು ಆಡಿ ಕಾರು ಕೂಡಾ ನೀಡಿದ್ದಳು ಎಂಬುದು ತಿಳಿದುಬಂದಿದೆ. 

ಶ್ವೇತಾಳ ಆಮಿಷವನ್ನು ಮೋನಿಕಾ ತಿರಸ್ಕರಿಸಿದಾಗ ಆರತಿ ದಯಾಳ್ ಮೊನಿಕಾಳ ಮನೆಗೆ ಆಗಮಿಸಿ, ಭೂಪಾಲ್ ಗೆ ತಮ್ಮ ಮಗಳನ್ನು ಕಳುಹಿಸುವಂತೆ ಮೋನಿಕಾಳ ತಂದೆಗೆ ಹೇಳಿದ್ದಳು, ನಂತರ ಆರತಿ  ದಯಾಳ್ ನಡೆಸುತ್ತಿದ್ದ ಎನ್ ಜಿ ಒ ಮೋನಿಕಾಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದ ನಂತರ ಆರ್ಥಿಕ ಸ್ಥಿತಿ ಉತ್ತಮವಾಗಿರದ ಮೋನಿಕಾಳ ತಂದೆ ಹಿರಾಲಾಲ್, 18 ವರ್ಷದ ಪುತ್ರಿಯನ್ನು ಆರತಿ ದಯಾಳ್ ಜೊತೆಗೆ ಭೂಪಾಲ್ ಗೆ ಕಳುಹಿಸಿದ್ದರು ಎಂಬ ಸಂಗತಿಯನ್ನು ಮೋನಿಕಾ ತಿಳಿಸಿದ್ದಾಳೆ ಎಂದು ಎಸ್ ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ವೇತಾ ಅಧಿಕಾರಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಎಂಎಂಎಸ್ ತೋರಿಸಿ ನೀನು ಇವರ ಹತ್ತಿರ ಹೋದರೆ ಬೇಕಾದೆಲ್ಲಾವೂ ಸಿಗುತ್ತದೆ ಎಂದು ಆರತಿ  ದಯಾಳ್ ಬಲವಂತಪಡಿಸಿದ್ದಾಗಿ ಮೋನಿಕಾ ಎಸ್ ಐಟಿ ಅಧಿಕಾರಿಗಳ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾಳೆ.

ಎನ್ ಜಿ ಒ ಹೆಸರಿನಲ್ಲಿ  ಬಡ ಮಧ್ಯಮವರ್ಗದ ಯುವತಿಯರಿಗೆ ಉದ್ಯೋಗದ ಆಮಿಷವೊಡ್ಡಲಾಗುತಿತ್ತು. ಶ್ವೇತಾ ಜೈನ್ ಹಾಗೂ ಆರತಿ  ದಯಾಳ್ ಅನೇಕ ಕಾಲೇಜು ಯುವತಿಯರ ತಲೆ ಕೆಡಿಸಿ, ಹನಿಟ್ರ್ಯಾಪ್ ಗೆ ಬೀಳಿಸುತ್ತಿದ್ದರು ಎಂಬುದು ಎಸ್ ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ. 

ಆಗಸ್ಟ್ 30 ರಂದು ಮೋನಿಕಾಳನ್ನು ಲಕ್ಸುರಿಯಾದ ಹೋಟೆಲ್ ವೊಂದಕ್ಕೆ ಕರೆದುಕೊಂಡು ಹೋಗಿ  60 ವರ್ಷದ ಇಂಜಿನಿಯರ್ ಹರ್ಭಜನ್ ಸಿಂಗ್  ಎಂಬವರನ್ನು ಪರಿಚಯ ಮಾಡಿಕೊಡಲಾಗಿದೆ. ನಂತರ ಆ ರಾತ್ರಿ  ಮೋನಿಕಾಳ ಜೊತೆಗೆ ಹರ್ಭಜನ್ ಸಿಂಗ್ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡ ಆರತಿ, ಹರ್ಭಜನ್ ಸಿಂಗ್ ಗೆ 3 ಕೋಟಿ ರೂ. ಬೇಡಿಕೆಯಿಟ್ಟಿದ್ದಳು. ಒಂದು ವೇಳೆ ಇದನ್ನು ಪೋಷಕರಿಗೆ ಹೇಳಿದರೆ ವೆಬ್ ಸೈಟ್ ನಲ್ಲಿ ಹಾಕುವುದಾಗಿ ಮೋನಿಕಾಳಿಗೆ ಬೆದರಿಕೆವೊಡ್ಡಿದಳು ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 

ಶ್ವೇತಾ ಹಾಗೂ ಆರ್ತಿ ದಯಾಳ್ ಹೀಗೆ ಗ್ಲಾಮರ್, ಪೈವ್ ಸ್ಟಾರ್ ಸಂಸ್ಕೃತಿಯ ಆಮಿಷವೊಡ್ಡಿ ಯುವತಿಯರನ್ನು ಸೆಳೆದು ರಾಜಕಾರಣಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಮಂಚಕ್ಕೆ ಕಳುಹಿಸುತ್ತಿದ್ದರು. ಕಾಲೇಜು ಯುವತಿಯರಲ್ಲದೆ 40 ಕಾಲ್ ಗರ್ಲ್ಸ್ ಗಳನ್ನು ಕೂಡಾ ಶ್ವೇತ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡು ಮಾಜಿ ಸಚಿವರು ಸೇರಿದಂತೆ ಇನ್ನಿತರ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದಳು ಎಂದು ಇಂದೋರ್ ಮೊದಲ ಮಹಿಳಾ ಎಸ್ ಎಸ್ ಪಿ ರುಚಿ ವರ್ಧನ್ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com