ಭ್ರಷ್ಟಾಚಾರ ಆರೋಪ: ಕೇಂದ್ರದಿಂದ ಮತ್ತೆ 15 ಆದಾಯ ತೆರಿಗೆ ಅಧಿಕಾರಿಗಳ ವಜಾ

ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಕೃತ್ಯಗಳ ಆರೋಪದಡಿ ಕೇಂದ್ರ ಸರ್ಕಾರ ಶುಕ್ರವಾರ ಮತ್ತೆ ಆದಾಯ ತೆರಿಗೆ ಇಲಾಖೆ 15  ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಕೃತ್ಯಗಳ ಆರೋಪದಡಿ ಕೇಂದ್ರ ಸರ್ಕಾರ ಶುಕ್ರವಾರ ಮತ್ತೆ ಆದಾಯ ತೆರಿಗೆ ಇಲಾಖೆ 15  ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. 

ಕಿರುಕುಳ, ಲಂಚ, ಸುಲಿಗೆ ಮತ್ತು ಭ್ರಷ್ಟಾಚಾರದಂತಹ ಆರೋಪದ ಮೇಲೆ ನಿಯಮ 56 (ಜೆ) ಅಡಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ 15 ಅಧಿಕಾರಿಗಳನ್ನು ಸರ್ಕಾರ ಕೆಲಸದಿಂದ ತೆಗೆದು ಹಾಕಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ಆರೋಪದ ಮೇಲೆ ಅಧಿಕಾರಿಗಳನ್ನು ವಜಾಗೊಳಿಸುತ್ತಿರುವುದು ನಾಲ್ಕನೆ ಬಾರಿ.

ಈ ಹಿಂದೆ ಒಂದು ಬಾರಿ 22, ಒಂದು ಬಾರಿ 12 ಹಾಗೂ ಮತ್ತೊಂದು ಬಾರಿ 15 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ್ದ ಕೇಂದ್ರ ಸರ್ಕಾರ ಈಗ ಮತ್ತೆ 15 ಅಧಿಕಾರಿಗಳು ಬಿಸಿ ಮುಟ್ಟಿಸಿದೆ.

ಪ್ರಧಾನ ಆಯುಕ್ತ(ಆದಾಯ ತೆರಿಗೆ) ಒ.ಪಿ ಮೀನಾ, ಸೈಲೇಂದ್ರ ಮಾಮಿಡಿ, ಸಿಐಟಿ ಪಿ.ಕೆ. ಬಜಾಜ್, ಸಂಜೀವ್ ಘೆ, ಕೆ.ಜಯಪ್ರಕಾಶ್, ವಿ ಅಪ್ಪಲಾ ರಾಜು, ರಾಕೇಶ್ ಹೆಚ್, ಶರ್ಮಾ ಮತ್ತು ನಿತಿನ್ ಗರ್ಗ್ ಸೇರಿದಂತೆ 15 ಅಧಿಕಾರಿಗಳನ್ನು ಇಂದು ವಜಾಗೊಳಿಸಲಾಗಿದೆ.

ಭ್ರಷ್ಟ ತೆರಿಗೆ ಅಧಿಕಾರಿಗಳನ್ನು ವಜಾಗೊಳಿಸುವ ನಿರ್ಧಾರವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡದಂತೆ ತೆರಿಗೆ ಆಡಳಿತವನ್ನು ಸ್ವಚ್ಚಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಭರವಸೆಗೆ ಅನುಗುಣವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com