ಬಸ್ಸಿಗೆ ದಾರಿ ಬಿಡದೆ ರಸ್ತೆ ಮಧ್ಯೆ ಸ್ಕೂಟಿ ನಿಲ್ಲಿಸಿದ ಮಹಿಳೆ! ಮುಂದೆನಾಯ್ತು? ವಿಡಿಯೋ

ಬಸ್ಸಿಗೆ ದಾರಿ ಬಿಡದೆ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಸರಿಯಾದ ಮಾರ್ಗದಲ್ಲಿ ಬಾರದ ಬಸ್ ಚಾಲಕನಿಗೆ ಈ ಮಹಿಳೆ  ರಸ್ತೆ ಬಿಡದೆ  ಪಾಠ ಕಲಿಸಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 
ಬಸ್ಸಿಗೆ ದಾರಿ ಬಿಡದ ಮಹಿಳೆ
ಬಸ್ಸಿಗೆ ದಾರಿ ಬಿಡದ ಮಹಿಳೆ

ತಿರುವನಂತಪುರಂ: ಬಸ್ಸಿಗೆ ದಾರಿ ಬಿಡದೆ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಸರಿಯಾದ ಮಾರ್ಗದಲ್ಲಿ ಬಾರದ ಬಸ್ ಚಾಲಕನಿಗೆ ಈ ಮಹಿಳೆ  ರಸ್ತೆ ಬಿಡದೆ  ಪಾಠ ಕಲಿಸಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಎದುರುಗಡೆಯಿಂದ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಬಸ್ಸಿಗೆ  ದಾರಿ ಬಿಡದೆ ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಮಹಿಳೆ ಕುಳಿತಿದ್ದಾರೆ. ಕೊನೆಗೆ ವಿಧಿಯಿಲ್ಲದೆ ಬಸ್ ಚಾಲಕ ಸರಿಯಾದ ಪಥಕ್ಕೆ ಬಸ್ ನ್ನು ತಿರುವಿಸಿಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿದೆ. 

ಗಲ್ಪ್ ನ್ಯೂಸ್ ಪ್ರಕಾರ ಕೇರಳದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಈ ಬಸ್ಸಿನ ನಂಬರ್ ಪ್ಲೇಟ್  ಉಲ್ಲೇಖಿಸಿ ಅನೇಕ ಮಂದಿ ಇದು ಕೇರಳದ್ದು ಎಂದು ದೃಢಪಡಿಸಿದ್ದಾರೆ. 

ದಿ ಗೋಸ್ಟ್ ರೈಡರ್ 31 ಎಂಬ ಟ್ವೀಟರ್ ಖಾತೆಯಿಂದ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸುಮಾರು 47 ಸಾವಿರ ಮಂದಿ ವೀಕ್ಷಿಸಿದ್ದಾರೆ. 4 ಸಾವಿರ ಲೈಕ್ ಬಂದಿದ್ದು, ಅನೇಕ ಮಂದಿ ಮಹಿಳೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com