ಮೈಸೂರು ಅರಮನೆಗೆ ಆಗಮಿಸಿದ ಪ್ರವಾಸಿಗರಿಗೆ ವಿಶೇಷ ಸ್ವಾಗತ

ನಾಡಹಬ್ಬ ಮೈಸೂರು ದಸರಾ ಹಬ್ಬ ವೀಕ್ಷಿಸಲು ಮೈಸೂರು ಅರಮನೆಗೆ ಆಗಮಿಸಿದ ಪ್ರವಾಸಿಗರಿಗೆ ಹೂ ಮತ್ತು ಮೈಸೂರು ಪಾಕ್ ನೀಡಿ, ಪ್ರವಾಸೋದ್ಯಮ ಇಲಾಖೆ ವಿಶೇಷವಾಗಿ ಬರಮಾಡಿಕೊಂಡಿತು.
ಪ್ರವಾಸಿಗರಿಗೆ ವಿಶೇಷ ಸ್ವಾಗತ
ಪ್ರವಾಸಿಗರಿಗೆ ವಿಶೇಷ ಸ್ವಾಗತ

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಬ್ಬ ವೀಕ್ಷಿಸಲು ಮೈಸೂರು ಅರಮನೆಗೆ ಆಗಮಿಸಿದ ಪ್ರವಾಸಿಗರಿಗೆ ಹೂ ಮತ್ತು ಮೈಸೂರು ಪಾಕ್ ನೀಡಿ, ಪ್ರವಾಸೋದ್ಯಮ ಇಲಾಖೆ ವಿಶೇಷವಾಗಿ ಬರಮಾಡಿಕೊಂಡಿತು.

ಶುಕ್ರವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವಿಶೇಷ ಅಭಿಯಾನ ನಡೆಸಿ ಎಲ್ಲಾ ಪ್ರವಾಸಿಗರನ್ನು ಸ್ವಾಗತಿಸಿತು.

ಪ್ರವಾಸೋದ್ಯಮ ಇಲಾಖೆಗೆ ಟ್ರಾವೆಲ್ಸ್ ಅಸೋಸಿಯೇಷನ್ ಕೂಡ ಕೈಜೋಡಿಸಿದ್ದು, ವೀರಭದ್ರಕುಣಿತ-ಡೊಳ್ಳು ಕುಣಿತ ತಂಡದಿಂದ ಪ್ರವಾಸಿಗರಿಗೆ ಅದ್ದೂರಿ ಸ್ವಾಗತ ಮಾಡಲಾಯಿತು.  

ಇದೇ ಸಂದರ್ಭದಲ್ಲಿ ಖುಷಿಯಿಂದ ಡೊಳ್ಳು ಕುಣಿತದವರ ಜೊತೆಗೆ ವಿದೇಶಿ ಪ್ರವಾಸಿಗರು ಭರ್ಜರಿ ನೃತ್ಯ ಮಾಡಿದರು.  
ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರಿಗೂ ವಿಶೇಷ ಸ್ವಾಗತ ಮಾಡಿ,  ಮೈಸೂರಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸಲೆಂದು ಟ್ರಾವೆಲ್ಸ್ ಅಸೋಸಿಯೇಷನ್ ಮನವಿ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com