ನಕಲಿ ಎನ್ ಕೌಂಟರ್ ನಡೆದಿದೆ ಎಂದು ಆರೋಪಿಸಿ ಸಿಬಿಐ ಎಸ್ಪಿ ಪ್ರಧಾನಿಗೆ ಪತ್ರ, ಸಾಕ್ಷಿಗಳಿಲ್ಲ ಎಂದ ಸಿಬಿಐ 

ಸಿಬಿಐಯ ಉಪ ಪೊಲೀಸ್ ವರಿಷ್ಠಾಧಿಕಾರಿ ಆರೋಪಕ್ಕೆ ಸಂಬಂಧಪಟ್ಟಂತೆ ನಡೆದ ತನಿಖೆ ವೇಳೆ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ಬಗ್ಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಸಿಬಿಐ ಹೇಳಿದೆ.
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ಕೇಂದ್ರ ತನಿಖಾ ಸಂಸ್ಥೆ ಸಿಬಿಐ

ನವದೆಹಲಿ: ಸಿಬಿಐಯ ಉಪ ಪೊಲೀಸ್ ವರಿಷ್ಠಾಧಿಕಾರಿ ಆರೋಪಕ್ಕೆ ಸಂಬಂಧಪಟ್ಟಂತೆ ನಡೆದ ತನಿಖೆ ವೇಳೆ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ಬಗ್ಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಸಿಬಿಐ ಹೇಳಿದೆ.
ಸಿಬಿಐಯ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.


ಪತ್ರದಲ್ಲಿ ಡಿಎಸ್ಪಿ ಸಿಬಿಐ ನಿರ್ದೇಶಕ ಆರ್ ಕೆ ಶುಕ್ಲಾ, ಕೇಂದ್ರ ಜಾಗೃತ ಆಯೋಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎನ್ ಪಿ ಮಿಶ್ರಾ ಅವರನ್ನು ಸಹ ಗುರುತಿಸಲಾಗಿದ್ದು, ಅದರಲ್ಲಿ ಸಿಬಿಐಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಎ ಕೆ ಭಟ್ನಾಗರ್ ಜಾರ್ಖಂಡ್ ನಲ್ಲಿ 14 ಮಂದಿ ಮುಗ್ಧ ನಾಗರಿಕರ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.


ಸಂಸ್ಥೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಕಾರಣ ಎ ಕೆ ಭಟ್ನಾಗರ್ ತನಿಖೆ ಮೇಲೆ ಪ್ರಭಾವ ಬೀರಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಸಿಬಿಐ ಕಳೆದ ಶುಕ್ರವಾರ ತಳ್ಳಿಹಾಕಿತ್ತು. ಸಂಸ್ಥೆ ಪತ್ರದಲ್ಲಿನ ಆರೋಪದ ಗಂಭೀರತೆಯನ್ನು ಪರಿಗಣಿಸಿ ತನಿಖೆ ಮಾಡಿದೆ ಎಂದು ಹೇಳಿದೆ.


ಈ ಬಗ್ಗೆ ಹೇಳಿಕೆಯಲ್ಲಿ ತನಿಖಾ ಸಂಸ್ಥೆಯ ವಕ್ತಾರ, ಸಿಬಿಐ ಎನ್ ಕೌಂಟರ್ ಕೇಸನ್ನು ಕಳೆದ ವರ್ಷ ಅಕ್ಟೋಬರ್ 22ರಂದು ರಾಂಚಿಯ ಜಾರ್ಖಂಡ್ ಹೈಕೋರ್ಟ್ ನಲ್ಲಿ ದಾಖಲಿಸಿದ್ದು ಅದು ಪೊಲೀಸ್ ಸಿಬ್ಬಂದಿ ಮೇಲೆ ಸಿಪಿಐ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣ ವಿಚಾರಣೆ ಹಂತದಲ್ಲಿದೆ. ಇದುವರೆಗೆ ತನಿಖೆ ವೇಳೆ ಎ ಕೆ ಭಟ್ನಾಗರ್ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ, ಎನ್ ಕೌಂಟರ್ ನಡೆದಿದ್ದ ಸಮಯದಲ್ಲಿ ಅವರು ಜಾರ್ಖಂಡ್ ನ ಇನ್ಸ್ ಪೆಕ್ಟರ್ ಜನರಲ್ ಆಗಿದ್ದರು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com