ಪಶ್ಚಿಮ ಘಟ್ಟದಲ್ಲಿ ಪತ್ತೆಯಾದ ಹೊಸ ಪ್ರಬೇಧದ ಹಾವಿಗೆ ಶಿವಸೇನೆ ಮುಖ್ಯಸ್ಥ ಠಾಕ್ರೆ ಪುತ್ರನ ಹೆಸರು

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧದ ಹಾವೊಂದಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಕಿರಿಯ ಪುತ್ರ ತೇಜಸ್ ಠಾಕ್ರೆಯ ಹೆಸರನ್ನು ಸಂಶೋಧನೆಯ ನೆನಪಿನಾರ್ಥವಾಗಿ ಇಡಲಾಗಿದೆ. 
ಪಶ್ಚಿಮ ಘಟ್ಟದಲ್ಲಿ ಪತ್ತೆಯಾದ ಹೊಸ ಪ್ರಬೇಧದ ಹಾವಿಗೆ ಶಿವಸೇನೆ ಮುಖ್ಯಸ್ಥ ಠಾಕ್ರೆ ಪುತ್ರನ ಹೆಸರು
ಪಶ್ಚಿಮ ಘಟ್ಟದಲ್ಲಿ ಪತ್ತೆಯಾದ ಹೊಸ ಪ್ರಬೇಧದ ಹಾವಿಗೆ ಶಿವಸೇನೆ ಮುಖ್ಯಸ್ಥ ಠಾಕ್ರೆ ಪುತ್ರನ ಹೆಸರು

ಔರಂಗಾಬಾದ್: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧದ ಹಾವೊಂದಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಕಿರಿಯ ಪುತ್ರ ತೇಜಸ್ ಠಾಕ್ರೆಯ ಹೆಸರನ್ನು ಸಂಶೋಧನೆಯ ನೆನಪಿನಾರ್ಥವಾಗಿ ಇಡಲಾಗಿದೆ.
 
ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವು ಕ್ಯಾಟ್ ಸ್ನೇಕ್ ವರ್ಗಕ್ಕೆ ಸೇರಿದ್ದಾಗಿದೆ. ಇದೀಗ ಈ ಹಾವಿಗೆ ಠಾಕ್ರೇಸ್ ಕ್ಯಾಟ್ ಸ್ನೇಕ್ ಎಂದು ಹೆಸರಿಡಲಾಗಿದೆ. 

ಹೊಸ ಪ್ರಬೇಧದ ಹಾವಿನ ಸಂಶೋಧನಾ ವರದಿಯನ್ನು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪತ್ರಿಕೆಯಲ್ಲಿ ಗುರುವಾರ ಪ್ರಕಟಿಸಲಾಗಿದೆ. 

ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವುಗಳು ಭಾರತಾದಾದ್ಯಂತ ಹರಡಿಕೊಂಡಿದೆ. ಆದರೆ, ಕೆಲವೊಂದು ವಿಶೇಷ ಜಾತಿಯ ಹಾವುಗಳು ಮಾತ್ರ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತದೆ ಎಂದು ಪುಣೆ ಮೂಲಕ ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆಯ ನಿರ್ದೇಶಕ ವರದ್ ಗಿರಿ ಹೇಳಿದ್ದಾರೆ. 

ತೇಜಸ್ ಠಾಕ್ರೆ 2015ರಲ್ಲಿ ಮೊದಲ ಬಾರಿಗೆ ಈ ಹಾವನ್ನು ಪತ್ತೆ ಹಚ್ಚಿದ್ದರು. ಬಳಿಕ ಹಾವಿನ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅದರ ವರದಿಯನ್ನು ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆಯ ಮುಂದಿಟ್ಟಿದ್ದರು. ಈ ಮಾಹಿತಿ ಮತ್ತಷ್ಟು ಸಂಶೋಧನೆ ಸಹಾಯವಾಯಿತು ಎಂದು ತಿಳಿಸಿದ್ದಾರೆ. 

ಈ ಬಗ್ಗೆ ತೇಜರ್ ಅವರ ಹಿರಿಯ ಸಹೋದರ ಶಿವಸೇನಾ ಯುವಘಟಕದ ಮುಖ್ಯಸ್ಥ ಆದಿತ್ಯ ಠಾಕ್ರೆಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದು ನನ್ನ ಸಹೋದರ ತೇಜಸ್ ಸಂಶೋಧನೆ. ಸುಂದರ ಕಪ್ರಬೇಧವನ್ನು ಪಶ್ಚಿಮಘಟ್ಟದಲ್ಲಿ ಪತ್ತೆ ಹಚ್ಚಿದ್ದಾನೆ. ಹೀಗಾಗಿ ಈ ಹೊಸ ಪ್ರಬೇಧದ ಹಾವಿಗೆ ತೇಜಸ್ ಠಾಕ್ರೆ ಹೆಸರನ್ನು ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com