'ವಿಶ್ವಸಂಸ್ಥೆ' 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ: ಇಮ್ರಾನ್'ಗೆ ಗೌತಮ್ ಗಂಭೀರ್ ತಿರುಗೇಟು

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ನೀಡಲಾಗಿದ್ದ ಆ 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ಹಾಗೂ ಬುದ್ಧಿಶಕ್ತಿಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್'ಗೆ ಭಾರತ ತಂಡ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರವ್ ಭಾನುವಾರ ತಿರುಗೇಟು ನೀಡಿದ್ದಾರೆ. 
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ನೀಡಲಾಗಿದ್ದ ಆ 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ಹಾಗೂ ಬುದ್ಧಿಶಕ್ತಿಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್'ಗೆ ಭಾರತ ತಂಡ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರವ್ ಭಾನುವಾರ ತಿರುಗೇಟು ನೀಡಿದ್ದಾರೆ. 

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಹಾಗೂ ಇಮ್ರಾನ್ ಖಾನ್ ಅವರ ಭಾಷಣ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಗಂಭೀರ್, ವಿಶ್ವಸಂಸ್ಥೆಯಲ್ಲಿ ನೀಡಲಾಗಿದ್ದ 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ಹಾಗೂ ಬುದ್ಧಿಶಕ್ತಿಯನ್ನು ತೋರಿಸುತ್ತದೆ. ಪ್ರಧಾನಿ ಮೋದಿಯವರು ಶಾಂತಿ ಹಾಗೂ ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಂಡರೆ, ತನ್ನ ಸೇನೆಯ ಕೈಗೊಂಬೆಯಾಗಿರುವ ಪಾಕಿಸ್ತಾನ ಭಾರತದ, ಮೇಲೆ ಪರಮಾಣು ಅಸ್ತ್ರ ದಾಳಿ ಮಾಡುವ ಬೆದರಿಕೆ ಹಾಕಿದೆ. ಕಾಶ್ಮೀರದಲ್ಲಿ ಶಾಂತಿ ಉತ್ತೇಜಿಸುವುದಾಗಿ ಹೇಳಿಕೊಳ್ಳುವ ಅದೇ ವ್ಯಕ್ತಿ ಇವರಾಗಿದ್ದಾರೆಂದು ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದ ವೇಳೆ ಪಾಕಿಸ್ತಾನದ ಹೆಸರು ಹೇಳದೆಯೇ ಆ ದೇಶ ಉಗ್ರವಾದಕ್ಕೆ ನೀಡುತ್ತಿರುವ ಬೆಂಬಲವವನ್ನು ಪ್ರಧಾನಿ ಮೋದಿಯವರು ಬಯಲಿಗೆಳೆದಿದ್ದರು. ಜೊತೆಗೆ, ಹವಾಮಾನ ವೈಪರೀತ್ಯ, ವಿಶ್ವ ಆರೋಗ್ಯ ಸಂಸ್ಥೆ, ಶೌಚಾಲಯ, ಸ್ವಚ್ಛತೆ ಹೀಗೆ ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಪ್ರಬುದ್ಧತೆಯನ್ನು ಮೆರೆದಿದ್ದರು. ಆದರೆ, ಇಮ್ರಾನ್ ಖಾನ್ ಮಾತ್ರ ತಮ್ಮ 50 ನಿಮಿಷಗಳ ಭಾಷಣದಲ್ಲಿ 70 ಬಾರಿ ಇಸ್ಲಾಂ, 21 ಬಾರಿ ಕಾಶ್ಮೀರ, 16 ಬಾರಿ ಭಾರತ, 12 ಬಾರಿ ಮೋದಿ, 10 ಆರ್'ಎಸ್ಎಸ್, 5 ಬಾರಿ ಹಿಂದೂ ವಿಚಾರಗಳನ್ನು ಪ್ರಸ್ತಾಪಿಸಿ ನೈಜ ಜಾಗತಿಕ ವಿಚಾರಗಳಿಂದಲೇ ದೂರ ಸರಿದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com