ಕುಗ್ಗಿದ ರಮ್ಯಾ ವರ್ಚಸ್ಸು: ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿ ರೋಹನ್ ಗುಪ್ತಾ ನೇಮಕ 

ಎಐಸಿಸಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರನ್ನು ಆ ಹುತ್ತೆಯಿಂದ ಕಾಂಗ್ರೆಸ್ ಅಧಿಕೃತವಾಗಿ ಕಿತ್ತುಹಾಕಿದ್ದು, ಸ್ಥಾನಕ್ಕೆ ರೋಹನ್ ಗುಪ್ತಾ ಅವರನ್ನು ಶನಿವಾರ ನೇಮಕ ಮಾಡಿದೆ. 
ರಮ್ಯಾ
ರಮ್ಯಾ

ನವದೆಹಲಿ: ಎಐಸಿಸಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರನ್ನು ಆ ಹುತ್ತೆಯಿಂದ ಕಾಂಗ್ರೆಸ್ ಅಧಿಕೃತವಾಗಿ ಕಿತ್ತುಹಾಕಿದ್ದು, ಸ್ಥಾನಕ್ಕೆ ರೋಹನ್ ಗುಪ್ತಾ ಅವರನ್ನು ಶನಿವಾರ ನೇಮಕ ಮಾಡಿದೆ. 

2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ ಆರು ತಿಂಗಳುಗಳ ಕಾಲ ಸಂಸದೆಯಾಗಿ ಕಾರ್ಯನಿರ್ವಹಿಸಿ, 2014ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ರಾಜ್ಯ ರಾಜಕೀಯ ಬಿಟ್ಟು ದೆಹಲಿಗೆ ಹೋದರು. ರಾಹುಲ್ ಗಾಂಧಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾರನ್ನು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. 

ಇದಾದ ಬಳಿಕ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಕ್ರಿಯಾಶೀಲರಾಗಿದ್ದ ರಮ್ಯಾ ಅವರು, ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಟೀಕಿಸಲು ಆರಂಭಿಸಿದ್ದರು. ಲೋಕಸಭಾ ಚುನಾವಣೆ ಬಳಿಕ ರಮ್ಯಾ ಮೌನ ತಾಳಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದರು. ಇದೇ ವೇಳೆ ತಮ್ಮ ಖಾತೆಗಳಿಂದ ರಮ್ಯಾ ಅವರು ಹೊರಬರುವ ನಿರ್ಧಾರ ಕೈಗೊಂಡು, ಕಾಂಗ್ರೆಸ್ ಸೇರಿದಂತೆ ತಮ್ಮ ವೈಯಕ್ತಿಕ ಖಾತೆಯಲ್ಲಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಎಂಬ ವಿವರವನ್ನೂ ತೆಗೆದು ಹಾಕಿದ್ದರು. ಇದು ಎಲ್ಲರಲ್ಲೂ ಆಶ್ಚರ್ಯವನ್ನು ತರಿಸಿತ್ತು. 

ಲೋಕಸಭಾ ಚುನಾವಣೆ ಬಳಿಕ ಹುದ್ದೆಗೆ ರಮ್ಯಾ ರಾಜೀನಾಮೆ ನೀಡಿದ್ದರು. ಈ ಹುದ್ದೆ ಮೂರು ತಿಂಗಳುಗಳಿಂದ ತೆರವಾಗಿತ್ತು. ಇದೀಗ ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಸ್ಥಾನಕ್ಕೆ ರೋಹನ್ ಗುಪ್ತಾ ಅವರನ್ನು ನೇಮಕ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com