ಮಹಾ ಚುನಾವಣೆ: ಬಿಜೆಪಿ ಸೇರಿದ ಎನ್ ಸಿಪಿ ಅಭ್ಯರ್ಥಿ ನಮಿತಾ ಮುಂಡದ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಕೈಜ್ ನಿಂದ ಎನ್ ಸಿಪಿ ಅಭ್ಯರ್ಥಿಯಾಗಿದ್ದ ನಮಿತಾ ಮುಂಡದ ಅವರು ಕೊನೆಗಳಿಗೆಯಲ್ಲಿ ಪಕ್ಷಕ್ಕೆ ಕೈಕೊಟ್ಟು ಸೋಮವಾರ ಬಿಜೆಪಿ ಸೇರಿದ್ದಾರೆ.
ನಮಿತಾ ಮುಂಡದ
ನಮಿತಾ ಮುಂಡದ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಕೈಜ್ ನಿಂದ ಎನ್ ಸಿಪಿ ಅಭ್ಯರ್ಥಿಯಾಗಿದ್ದ ನಮಿತಾ ಮುಂಡದ ಅವರು ಕೊನೆಗಳಿಗೆಯಲ್ಲಿ ಪಕ್ಷಕ್ಕೆ ಕೈಕೊಟ್ಟು ಸೋಮವಾರ ಬಿಜೆಪಿ ಸೇರಿದ್ದಾರೆ.

ನಮಿತಾ ಅವರ ಜತೆ ವಿಬಿಎ ಮುಖಂಡ ಗೋಪಿಚಂದ್ ಪಡೇಲ್ಕರ್ ಮತ್ತು ಕಾಂಗ್ರೆಸ್ ಶಾಸಕ ಕಾಶಿರಾಮ್ ಪವಾರ್ ಅವರು ಸಹ ಇಂದು ಬಿಜೆಪಿ ಸೇರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಂಗ್ಲಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಪಡೇಲ್ಕರ್ ಅವರು ಈಗ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ಎನ್ ಸಿಪಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿರುದ್ಧ ಬಾರಾಮತಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ನಮಿತಾ ಮುಂಡದ ಅವರು ಬಿಜೆಪಿ ಸಂಸದೆ ಪ್ರತಿಮಾ ಮುಂಡೆ ಹಾಗೂ ಸಚಿವೆ ಪಂಕಜಾ ಮುಂಡೆ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದು, ಕೈಜ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದಕ್ಕು ಮುನ್ನ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ನಮಿತಾ ಮುಂಡದ ಕೈಜ್ ಅಭ್ಯರ್ಥಿ ಎಂದು ಘೋಷಿಸಿದ್ದರು.

ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com