ಸೈನಿಕರ ರೇಷನ್ ಭತ್ಯೆಗೆ 800 ಕೋಟಿ ರೂ. ಮೀಸಲು ಹಣ ಕೊಡಿ: ಕೇಂದ್ರ ಸರ್ಕಾರಕ್ಕೆ ಸಿಆರ್ ಪಿಎಫ್ ಬೇಡಿಕೆ

ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಗೆ ಹೆಚ್ಚುವರಿ ಹಣವಾದ 800 ಕೋಟಿ ರೂಪಾಯಿಯನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಅರೆಸೇನಾ ಪಡೆ ತನ್ನ ಸಿಬ್ಬಂದಿಗೆ ಈ ತಿಂಗಳು ರೇಷನ್ ಭತ್ಯೆ(ಆರ್ ಎಂಎ) ನೀಡುವುದನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಗೆ ಹೆಚ್ಚುವರಿ ಹಣವಾದ 800 ಕೋಟಿ ರೂಪಾಯಿಯನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಅರೆಸೇನಾ ಪಡೆ ತನ್ನ ಸಿಬ್ಬಂದಿಗೆ ಈ ತಿಂಗಳು ರೇಷನ್ ಭತ್ಯೆ(ಆರ್ ಎಂಎ) ನೀಡುವುದನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ.


ಈ ಮಧ್ಯೆ, ಜವಾನರಿಗೆ ರೇಷನ್ ಹಣವನ್ನು ನೀಡಿಲ್ಲ ಎಂಬ ವರದಿಯನ್ನು ತಳ್ಳಿಹಾಕಿರುವ ಸಿಆರ್ ಪಿಎಫ್, ಸೆಪ್ಟೆಂಬರ್ ತಿಂಗಳ ಭತ್ಯೆಯನ್ನು ಸದ್ಯದಲ್ಲಿಯೇ ನೀಡಲಾಗುವುದು ಎಂದಿದ್ದಾರೆ.


ಸಿಆರ್ ಪಿಎಫ್ ನ ಜವಾನರು ಮತ್ತು ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಈ ಭತ್ಯೆಯನ್ನು ಅವರ ಪ್ರತಿದಿನ ಊಟ-ತಿಂಡಿಗಳಿಗೆ ನೀಡಲಾಗುತ್ತಿದ್ದು ಇದು ಅವರ ತಿಂಗಳ ವೇತನದಲ್ಲಿ ಸೇರ್ಪಡೆಯಾಗುತ್ತದೆ.  ಈ ಸಮಸ್ಯೆ ಉಂಟಾಗಿರುವುದು ದೇಶದ 3.25 ಲಕ್ಷ ಸಿಆರ್ ಪಿಎಫ್ ಯೋಧರಿಗೆ ಭತ್ಯೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಪರಿಷ್ಕರಿಸಿದ್ದರಿಂದ.


ರೇಷನ್ ಭತ್ಯೆಯನ್ನು ಕೇಂದ್ರ ಗೃಹ ಸಚಿವಾಲಯ ಕಳೆದ ಜುಲೈ 22ರಂದು ಪರಿಷ್ಕರಿಸಿತ್ತು. ಅದರಡಿ ಜುಲೈ ತಿಂಗಳಲ್ಲಿ ಸುಮಾರು 2 ಲಕ್ಷ ಸಿಆರ್ ಪಿಎಫ್ ಯೋಧರಿಗೆ ಪ್ರತಿಯೊಬ್ಬರಿಗೆ ತಲಾ 22 ಸಾವಿರದ 194 ರೂಪಾಯಿ ರೇಷನ್ ಭತ್ಯೆ ನೀಡಲಾಗಿತ್ತು. ಇದು ಈ ಹಿಂದೆ ನೀಡುತ್ತಿದ್ದ ರೇಷನ್ ಭತ್ಯೆಗಿಂತ ಆರು ಪಟ್ಟು ಹೆಚ್ಚಾಗಿದೆ. ಕಳೆದ ತಿಂಗಳು ಪರಿಷ್ಕೃತ ರೇಷನ್ ಭತ್ಯೆ ನೀಡಲು 800 ಕೋಟಿ ರೂಪಾಯಿ ಮೀಸಲು ನಿಧಿಯನ್ನು ಬಿಡುಗಡೆ ಮಾಡುವಂತೆ ಸಿಆರ್ ಪಿಎಫ್ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com