ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಸರಸ ಸಲ್ಲಾಪ, ಮಾಜಿ ಮುಖ್ಯಮಂತ್ರಿ ಸೆಕ್ಸ್ ವಿಡಿಯೋ ವೈರಲ್?

ಇತ್ತೀಚೆಗಷ್ಟೇ ದೇಶದ ಅತೀ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ವೊಂದನ್ನು ಎಸ್ಐಟಿ ಅಧಿಕಾರಿಗಳು ಬಯಲು ಮಾಡಿದ್ದು ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಯೊಬ್ಬರು ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಒಂದು ವೈರಲ್ ಎನ್ನಲಾಗಿದೆ.

Published: 30th September 2019 04:40 PM  |   Last Updated: 01st October 2019 11:28 AM   |  A+A-


honey trap

ಸಂಗ್ರಹ ಚಿತ್ರ

Posted By : Vishwanath S
Source : Online Desk

ಭೋಪಾಲ್: ಇತ್ತೀಚೆಗಷ್ಟೇ ದೇಶದ ಅತೀ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ವೊಂದನ್ನು ಎಸ್ಐಟಿ ಅಧಿಕಾರಿಗಳು ಬಯಲು ಮಾಡಿದ್ದು ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಯೊಬ್ಬರು ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಒಂದು ವೈರಲ್ ಆಗಿದೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಎಸ್ಐಟಿ ಅಧಿಕಾರಿಗಳು ದೊಡ್ಡ ಹನಿಟ್ರ್ಯಾಪ್ ಪ್ರಕರಣವೊಂದನ್ನು ಪತ್ತೆಹಚ್ಚಿದ್ದರು. ಇದರಲ್ಲಿ ಮಾಜಿ ರಾಜ್ಯಪಾಲ, ಮಾಜಿ ಸಿಎಂ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳು ಈ ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿತ್ತು. 

ಇದೀಗ ಎರಡು ವಿಡಿಯೋಗಳು ಮಧ್ಯಪ್ರದೇಶದ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಒಂದು ಮಾಜಿ ಸಿಎಂ ಎಂದು ಹೇಳಲಾಗಿದೆ. ಇನ್ನೊಂದು ವಿಡಿಯೋ ಹಿಂದೂ ಸಂಘಟನೆಯೊಂದರ ನಾಯಕರ ಆಪ್ತ ಸಹಚರರೊಬ್ಬರದ್ದು ಎಂದು ಹೇಳಲಾಗಿದೆ. ಆದರೆ ಈ ಎರಡು ವಿಡಿಯೋ ನಿಖರತೆ ಇನ್ನು ಸ್ಪಷ್ಟವಾಗಿಲ್ಲ. 

ಬಾಲಿವುಡ್ ನ ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಹೆಚ್ಚು ಕಾಲ್ ಗರ್ಲ್ಸ್ ಸೇರಿ ದೊಡ್ಡ ದೊಡ್ಡ ಕುಳಗಳನ್ನೇ ಹನಿಟ್ರ್ಯಾಪ್ ಗೆ ಕೆಡವಿದ್ದು ಅದರಲ್ಲಿ ಮಧ್ಯಪ್ರದೇಶದ ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು.

ಬಾಲಿವುಡ್ ಬಿ-ಗ್ರೇಡ್ ನಟಿ ಶ್ವೇತಾ ಸ್ಟಾಪ್ನಿಲ್ ಜೈನ್ ಈ ಹನಿಟ್ರ್ಯಾಪ್ ಕಿಂಗ್ ಪಿನ್ ಆಗಿದ್ದಾಳೆ. ಮೊದಲಿಗೆ ಮಂತ್ರಿಗಳು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಅವರ ಜೊತೆ ಮೊಬೈಲ್ ನಲ್ಲಿ ಸಂವಾದ ನಡೆಸಿ ಅವರನ್ನು ಸೆಕ್ಸ್ ಗೆ ಆಹ್ವಾನಿಸುತ್ತಿದ್ದಳು. ನಂತರ ವಿಡಿಯೋಗಳನ್ನು ಮಾಡಿಸುತ್ತಿದ್ದಳು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp