ರಾಜಸ್ತಾನ್ ದರ್ಗಾದಲ್ಲಿ ಸೇರಿದ್ದ ಗುಂಪನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ

ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರೂ ರಾಜಸ್ತಾನದ ಅಜ್ಮೀರ್ ಜಿಲ್ಲೆಯ ಸರ್ವಾರ್ ಪಟ್ಟಣದ ದರ್ಗಾದಲ್ಲಿ ಸುಮಾರು ಮಂದಿ ಸೇರಿದ್ದರು, ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ತಾನ ದರ್ಗಾ
ರಾಜಸ್ತಾನ ದರ್ಗಾ

ಜೈಪುರ: ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರೂ ರಾಜಸ್ತಾನದ ಅಜ್ಮೀರ್ ಜಿಲ್ಲೆಯ ಸರ್ವಾರ್ ಪಟ್ಟಣದ ದರ್ಗಾದಲ್ಲಿ ಸುಮಾರು 100 ಮಂದಿ ಸೇರಿದ್ದರು, ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ,ಮಾರ್ಚ್ ತಿಂಗಳ ಕೊನೆಯಂದು ಅಜ್ಮೀರ್ ದರ್ಗಾದ ಸೂಫಿ  ಸಂತರಿಗೆ ಚಾದರ ಸಲ್ಲಿಸುವುದು ವಾಡಿಕೆ, ಅದರಂತೆ ದರ್ಗಾದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.

ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಜ್ಮೀರ್ ಎಸ್ ಪಿ ಕೇವಲ 5 ಮಂದಿಗೆ ಅನುಮತಿ ನೀಡಿದ್ದರು, ಆದರೆ ನಿಮ ಉಲ್ಲಂಘಿಸಿ 100ಕ್ಕೂ ಹೆಚ್ಚು ಮಂದಿ ಸೇರಿದ್ದರು. ಅವರನ್ನೆಲ್ಲಾ ಜಾಗ ಬಿಟ್ಟು ತೆರಳುವಂತೆ ಪೊಲೀಸರು ಸೂಚಿಸಿದರು,ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರಿಂದ ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರನಡೆಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com