ಇರಾನ್ ನಲ್ಲಿ ಸಿಲುಕಿರುವ 250 ಭಾರತೀಯರಿಗೆ ಕೊವಿಡ್-19 ಪಾಸಿಟಿವ್: ಸುಪ್ರೀಂಗೆ ಕೇಂದ್ರ ಮಾಹಿತಿ

ಇರಾನ್ ಕೋಮ್ ನಲ್ಲಿ ಸಿಲುಕಿರುವ 250 ಭಾರತೀಯ ಯಾತ್ರಿಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಅವರನ್ನು ಇನ್ನೂ ಸ್ಥಳಾಂತರಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇರಾನ್ ಕೋಮ್ ನಲ್ಲಿ ಸಿಲುಕಿರುವ 250 ಭಾರತೀಯ ಯಾತ್ರಿಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಅವರನ್ನು ಇನ್ನೂ ಸ್ಥಳಾಂತರಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಭಾರತೀಯ ರಾಯಭಾರ ಕಚೇರಿ ಇರಾನ್ ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂಆರ್ ಶಾಹ್ ಅವರನ್ನೊಳಗೊಂಡ ಸುಪ್ರೀಂ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.

ಇರಾನ್ ನಲ್ಲಿ ಸಿಲುಕಿದ್ದ ಸುಮಾರು 500 ಭಾರತೀಯ ಯಾತ್ರಿಕರನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ. ಸದ್ಯ ದೇಶದಲ್ಲಿ ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿರುವುದರಿಂದ ಉಳಿದ 250 ಯಾತ್ರಿಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ವಿದೇಶಾಂಗ ಸಚಿವಾಲಯದ ನಿರ್ಧಾರಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ಸರ್ಕಾರದ ಪರವಾಗಿ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com