ಕೊರೋನಾ ವೈರಸ್: ಭಾರತದಲ್ಲಿ 50ಕ್ಕೇರಿದ ಸಾವಿನ ಸಂಖ್ಯೆ, 1600ರ ಗಡಿ ದಾಟಿದ ಸೋಂಕು ಪ್ರಕರಣಗಳು

ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದ್ದು, ಅಂತೆಯೇ ಸೋಂಕು ಪ್ರಕರಣ ಗಳಸಂಖ್ಯೆ 1600ರ ಗಡಿ ದಾಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದ್ದು, ಅಂತೆಯೇ ಸೋಂಕು ಪ್ರಕರಣ ಗಳಸಂಖ್ಯೆ 1600ರ ಗಡಿ ದಾಟಿದೆ. 

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ 21 ದಿನಗಳ ಲಾಕ್‌ಡೌನ್‌ನ 7ನೇ ದಿನವಾದ ಮಂಗಳವಾರ ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ1,619ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 50ಕ್ಕೇರಿದೆ. ಅಸ್ಸಾಂನಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಮೊದಲ  ಪ್ರಕರಣ ವರದಿಯಾಗಿದ್ದು, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶದಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ. 

ಮಹಾರಾಷ್ಟ್ರದಲ್ಲಿ ಇಂದು ಮತ್ತೋರ್ವ ವ್ಯಕ್ತಿ ಕೊರೋನಾ ವೈರಸ್ ಗೆ ಬಲಿಯಾಗಿದ್ದು, ಮಹಾರಾಷ್ಟ್ರದ ಪಾಲ್ಗಾರ್ ನಿವಾಸಿ 50 ವರ್ಷ ವ್ಯಕ್ತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಗದೇ ಅವರು ಸಾವನ್ನಪ್ಪಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲೂ ಇಂದು ಮತ್ತೋರ್ವ ವ್ಯಕ್ತಿ  ವೈರಸ್ ಸೋಂಕಿಗೆ ಬಲಿಯಾಗಿದ್ದು, ಆ ಮೂಲಕ ಬಂಗಾಳದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 4ಕ್ಕೇರಿಕೆಯಾಗಿದೆ. ಕೋಲ್ಕಚಾದ ನೀಲ್ ರತನ್ ಸಿರ್ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಅಂದಹಾಗೆ ಬಂಗಾಳದಲ್ಲಿ  ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಮಂಗಳವಾರ ಕೇರಳ, ಮಧ್ಯ ಪ್ರದೇಶದಲ್ಲೂ ತಲಾ ಒಬ್ಬರು ಕೊರೋನಾ ವೈರಸ್ ಸೋಂಕಿನಿಂದಾಗಿ ಬಲಿಯಾಗಿದ್ದಾರೆ. ಒಟ್ಟಾರೆ ಇಂದು ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 50ಕ್ಕೇರಿದೆ. ಅಂತೆಯೇ ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ1,619ಕ್ಕೆ  ಏರಿಕೆಯಾಗಿದ್ದು, ಈ ಪೈಕಿ 172 ಮಂದಿ ಗುಣಮುಖರಾಗಿದ್ದಾರೆ. 

ದೆಹಲಿಯ ನಿಜಾಮುದ್ದೀನ್ ಪ್ರದೇಶ ಸೇರಿದಂತೆ ಕೇಂದ್ರ ಸರ್ಕಾರ ದೇಶದಲ್ಲಿ 16 ಪ್ರದೇಶಗಳಲ್ಲಿ ಕೊರೋನಾ ವೈರಸ್ ಹಾಟ್ ಸ್ಪಾಟ್ ಗಳನ್ನು ಗುರುತಿಸಿದೆ. ಇವುಗಳನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ದೆಹಲಿಯ ದಿಲ್ಶಾದ್ ಗಾರ್ಡನ್, ನಿಜಾಮುದ್ದೀನ್ ಪ್ರದೇಶ,  ಕೇರಳದ ಕಾಸರಗೋಡು, ಫಥನಂತಿಟ್ಟ, ಉತ್ತರ ಪ್ರದೇಶದ ಮೀರತ್, ನೋಯ್ಡಾ, ರಾಜಸ್ಥಾನದ ಭಿಲ್ವಾರ, ಜೈಪುರ, ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ, ಗುಜರಾತ್ ನ ಅಹ್ಮದಾಬಾದ್, ಮಧ್ಯಪ್ರದೇಶದ ಇಂದೋರ್, ಪಂಜಾಬ್ ನ ನವನ್ ಶಹರ್, ಕರ್ನಾಟಕದ ಬೆಂಗಳೂರು,  ತಮಿಳುನಾಡಿನ ಈರೋಡ್, ಅಂಡಮಾನ್ ಮತ್ತು ನಿಕೋಬಾರ್ ಗಳನ್ನು ಕೊರೋನಾ ವೈರಸ್ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ.

ಇನ್ನು ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದ 24 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಭೆಯಲ್ಲಿ ಭಾಗವಹಿಸಿದ 700 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಪೈಕಿ 335 ಮಂದಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಗಮಿಸಿದ್ದ 6 ಮಂದಿ ಕೊರೋನಾ ವೈರಸ್ ಲಕ್ಷಣದಿಂದ ಸಾವನ್ನಪ್ಪಿದ್ದಾರೆ  ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com