ಜಮಾತ್ ಕಾರ್ಯಕರ್ತರ ಹುಡುಕಿ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ: ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ

ನಿಜಾಮುದ್ದೀನ್ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ತಬ್ಲೀಕ್ ಇ ಜಮಾತ್ ಕಾರ್ಯಕರ್ತರನ್ನು ಹುಡುಕಿ ಈ ಕೂಡಲೇ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜಮಾತ್ ಕಾರ್ಯಕರ್ತರ ಹುಡುಕಿ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ: ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ

ನವದೆಹಲಿ: ನಿಜಾಮುದ್ದೀನ್ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ತಬ್ಲೀಕ್ ಇ ಜಮಾತ್ ಕಾರ್ಯಕರ್ತರನ್ನು ಹುಡುಕಿ ಈ ಕೂಡಲೇ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ  ನೀಡಿದೆ.

ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ ತೆಲಂಗಾಣ ಮೂಲದ 6 ಮಂದಿ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ ಬೆನ್ನಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರರಿಗೂ ಸೋಂಕು ಹರಡಿರುವ ಕುರಿತು ಶಂಕೆ  ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ವಿದೇಶಿಗರನ್ನೂ ಕೂಡಲೇ ಹುಡುಕಿ ಗಡಿಪಾರು ಮಾಡುವಂತೆ ಕೇಂದ್ರ ಗೃಹ  ಸಚಿವಾಲಯ ಸೂಚನೆ ನೀಡಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದ್ದು, ವಿದೇಶಿ ಜಮಾತ್ ಕಾರ್ಯಕರ್ತರ ಕೊರೋನಾ ವೈರಸ್ ಪರೀಕ್ಷೆ ನೆಗೆಟಿವ್ ಇದ್ದರೂ ಅವರನ್ನು ದೇಶದಿಂದ ಗಡಿಪಾರು ಮಾಡಿ. ಲಭ್ಯವಿರುವ  ಯಾವುದೇ ವಿಮಾನದಲ್ಲಿ ಅವರನ್ನು ಅವರ ಸ್ವದೇಶಕ್ಕೆ ಕಳುಹಿಸಿ ಎಂದು ಸೂಚಿಸಿದೆ. 

ಮಸೀದಿಯಲ್ಲಿ ನಡೆದ ತಬ್ಲಿಗಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಎಲ್ಲರನ್ನೂ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಹೊತ್ತಲ್ಲಿ ನಾವು ತಪ್ಪು ಹುಡುಕುವ  ಬದಲು ರೋಗ ಹರಡಿರುವ ಜಾಗಗಳ ಬಗ್ಗೆ ಪತ್ತೆ ಹಚ್ಚಿ ಅದು ಮತ್ತಷ್ಟು ಹರಡದಂತೆ ನೋಡಿಕೊಳ್ಳ ಬೇಕು ಎಂದು ಹೇಳಿದೆ. ಇನ್ನು ಈ ಧಾರ್ಮಿಕ ಸಭೆಯಲ್ಲಿ ಭಾಗಿಯಾದ 24 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಭೆಯಲ್ಲಿ ಭಾಗವಹಿಸಿದ 700 ಮಂದಿಯನ್ನು  ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಪೈಕಿ 335 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಗಮಿಸಿದ್ದ  6 ಮಂದಿ ಕೊರೋನಾ ವೈರಸ್ ಲಕ್ಷಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. 

70 ದೇಶಗಳಿಂದ 2000ಕ್ಕೂ ಅಧಿಕ ವಿದೇಶಿಗರು ಭಾಗಿ
ಇನ್ನು ಮಸೀದಿಯ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತೀಯರು ಮಾತ್ರವಲ್ಲದೇ ಸುಮಾರು 70 ದೇಶಗಳಿಂದ 2000ಕ್ಕೂ ಅಧಿಕ ವಿದೇಶಿಗರು ಪಾಲ್ಗೊಂಡಿದ್ದರು. ಈ ಪೈಕಿ ಬಾಂಗ್ಲಾದೇಶದಿಂದ 493 ಮಂದಿ, ಇಂಡೋನೇಷ್ಯಾದಿಂದ 472 ಮಂದಿ, ಮಲೇಷ್ಯಾದಿಂದ 150 ಮಂದಿ,  ಥೈಯ್ಲಾಂಡ್ ನಿಂದ 142 ಮಂದಿ ಸೇರಿದಂತೆ 70 ರಾಷ್ಟ್ರಗಳಿಂದ ಸುಮಾರು 2000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಇವರೆಲ್ಲರೂ ಈ ಕಾರ್ಯಕ್ರಮಕ್ಕಾಗಿ ಕಳೆದ ಆರು ತಿಂಗಳಿನಿಂದಲೇ ಭಾರತಕ್ಕೆ ಆಗಮಿಸಿದ್ದರು. ಈ ಸಂಬಂಧ 6 ತಿಂಗಳ ಹಿಂದೆಯೇ ಭಾರತದ  ವೀಸಾ ಕೂಡ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮಿಳುನಾಡಿನ ಈರೋಡ್ ನಲ್ಲಿಸ ಮರ್ಕಜ್ ನಲ್ಲಿ ಪಾಲ್ಗೊಂಡಿದ್ದಜ 8 ಮಂದಿ ಇಂಡೋನೇಷ್ಯಾ ಪ್ರಜೆಗಳು ತಂಗಿದ್ದರು. 

ಭಾರತದಲ್ಲಿ ಸೋಂಕಿತರ ಸಂಖ್ಯೆಯ ಚಿತ್ರಣವನ್ನೇ ಬದಲಿಸುತ್ತಿದೆ ನಿಜಾಮುದ್ದೀನ್ ಮಸೀದಿ ಪ್ರಕರಣ
ನಿಜಾಮುದ್ದೀನ್ ಮಸೀದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ ಬಹುತೇಕರು ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣುತ್ತಿವೆ ಎಂದು ದೂರಿದ್ದು, ಇದೇ ಕಾರಣಕ್ಕೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ  ಶುರುವಾಗಿದೆ. ಇದೇ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತೀಯೊಬ್ಬ ವಿದೇಶಗನನ್ನೂ ಹುಡಿಕಿ ಅತನನ್ನು ಸ್ಕ್ರೀನಿಂಗ್ ಮಾಡಿ ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಲಿಸಿ ಚಿಕಿತ್ಸೆ ಕೊಡಿಸುವಂತೆ ಹೇಳಿದೆ. ಅಂತೆಯೇ ಸಾಧ್ಯವಾದಷ್ಟೂ ಬೇಗ ಅವರನ್ನು ಅವರವರ ದೇಶಕ್ಕೆ ವಾಪಸ್  ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದಕ್ಕಾಗಿ ಲಭ್ಯವಿರುವ ಯಾವುದೇ ವಿಮಾನಗಳಲ್ಲಿ ಅವರನ್ನು ದೇಶದಿಂದ ರವಾನಿಸುವಂತೆ ಸೂಚಿಸಿದೆ. ಈ ಸಂಬಂಧ ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ರಾಯಭಾರ ಕಚೇರಿಗಳಿಗೂ ಕೇಂದ್ರ ಸರ್ಕಾರ ಅಲರ್ಟ್ ಘೋಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com