ನಿಜಾಮುದ್ದೀನ್ ಮಸೀದಿಯಿಂದ ಕೊರೋನಾ ಸ್ಫೋಟ: ಕೂಡಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಪೊಲೀಸರ ಪತ್ರ

ಲಾಕ್ ಡೌನ್ ನಡುವಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ಹಿನ್ನೆಲೆಯಲ್ಲಿ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ದೆಹಲಿ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಾಕ್ ಡೌನ್ ನಡುವಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ಹಿನ್ನೆಲೆಯಲ್ಲಿ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ದೆಹಲಿ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ದೆಹಲಿಯಲ್ಲಿ ಮಸೀದಿಯೊಂದು ನಡೆಸಿದ್ದ ಧಾರ್ಮಿಕ ಕಾರ್ಯಕ್ರಮ, ಇದೀಗ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಸಾವಿರಾರು ಜನರು ಭಾಗವಿಸಿದ್ದ ಹಿನ್ನೆಲೆಯಲ್ಲಿ ಅನೇಕರಲ್ಲಿ ಈಗಾಗಲೇ ವೈರಸ್ ಪತ್ತೆಯಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯದ ಒಬ್ಬರು ಹಾಗೂ ತೆಲಂಗಾಣ ರಾಜ್ಯದ 6 ಮಂದಿ ವೈರಸ್'ಗೆ ಬಲಿಯಾಗಿದ್ದಾರೆ. 
 
ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಹಲವು ವಿದೇಶಿ ಪ್ರಜೆಗಳು ಈಗಲೂ ದೆಹಲಿ ವಿವಿಧ ಮಸೀದಿಗಳಲ್ಲಿ ನೆಲೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮಸೀದಿ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಕೋರಿ ದೆಹಲಿ ಪೊಲೀಸರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆಂದು ವರದಿಗಳು ತಿಳಿಸಿವೆ. 

ಇನ್ನು ಮಾರ್ಚ್ 2ನೇ ವಾರ ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್'ನ ಧಾರ್ಮಿಕ ಸಮಾವೇಶವು ಲಾಕ್ ಡೌನ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 

ಸಮಾವೇಶ ಮುಗಿಂದ ನಂತರ ಮಾರ್ಚ್ 16ರಂದು ದೆಹಲಿ ಸಿಎಂ ಕೇಜ್ರಿವಾಲ್ ಅವರು ಮಾರ್ಚ್ 31ರವರೆಗೆ ದೆಹಲಿಯಲ್ಲಿ 50 ಜನರಿಗಿಂತ ಹೆಚ್ಚು ಸೇರುವ ಧಾರ್ಮಿಕ ಸಮಾವೇಶಗಳಿಗೆ ಅವಕಾಶವಿಲ್ಲ ಎಂದು ಆದೇಶಿಸಿದ್ದರು. 

ಆದರೂ ಸಮಾವೇಶಕ್ಕೆ ಬಂದಿದ್ದ 8000 ಜನರಲ್ಲಿ 3400 ಜನರು ಮಸೀದಿಯಲ್ಲಿಯೇ ಬೀಡುಬಿಟ್ಟಿದ್ದರು. ಈ ನಡುವೆ ಇದೇ ಸಭೆಗೆ ಬಂದಿದ್ದ 7 ಇಂಡೋನೇಷ್ಯಾ ನಾಗರೀಕರು ತೆಲಂಗಾಣಕ್ಕೆ ತೆರಳುವಾಗ ಮಾರ್ಚ್. 20 ರಂದು ಕೊರೋನಾ ವೈರಸ್ ಪೀಡಿತರಾಗಿದ್ದು, ದೃಢವಾಯಿತು. 

ಮಸೀದಿ ತೆರವು ಮಾಡುವಂತೆ ಪೊಲೀಸರು. ಮಾ.23 ಹಾಗೂ 28 ರಂದು 2 ನೋಟಿಸ್ ನೀಡಿದರೂ, ಸಂಪೂರ್ಣ ತೆರವು ಮಾಡಲಿಲ್ಲ. ಮಾ.23ರಂದು 1500 ಜನರು ತೆರಳಿದ್ದರು. ಮಾ.24ರಂದು ಪ್ರಧಾನಿ ಮೋದಿಯವರು ಲಾಕ್ ಡೌನ್ ಆದೇಶ ಹೊರಡಿಸಿದ್ದರು. ಇದಾದ ಬಳಿಕವೂ 1000 ಜನರು ಮಸೀದಿಯಲ್ಲಿಯೇ ಇದ್ದರು ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com