ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಿದ್ದ ಸವಲತ್ತುಗಳನ್ನು ಹಿಂಪಡೆದ ಮೋದಿ ಸರ್ಕಾರ!

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಿಂಪಡೆದಿದೆ. 

Published: 01st April 2020 10:32 PM  |   Last Updated: 01st April 2020 10:32 PM   |  A+A-


Privileges of former J&K chief ministers withdrawn by Modi govt

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಿದ್ದ ಸವಲತ್ತುಗಳನ್ನು ಹಿಂಪಡೆದ ಮೋದಿ ಸರ್ಕಾರ!

Posted By : Srinivas Rao BV
Source : Online Desk

ನವದೆಹಲಿ: ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಿಂಪಡೆದಿದೆ. 

ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಒಟ್ಟಾರೆ 138 ಕಾನೂನುಗಳಿಗೆ ತಿದ್ದುಪಡಿ ತರಲಾಗಿದ್ದು, ಈ ಸಂಬಂಧ ಏ.01 ರಂದು ಸರ್ಕಾರ ಗೆಝೆಟ್ ನೋಟಿಫಿಕೇಶನ್ ಪ್ರಕಾರ, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ರಾಜ್ಯ ಶಾಸಕಾಂಗ ಸದಸ್ಯರ ಪಿಂಚಣಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಪಿಂಚಣಿ ಮೊತ್ತವನ್ನು ತಿಂಗಳಿಗೆ 50,000 ದಿಂದ 75,000 ರೂಗಳಿಗೆ ಏರಿಕೆ ಮಾಡಲಾಗಿದೆ. 

ಇನ್ನು ಇದೇ ವೇಳೆ ಕಾಯ್ದೆಯ ಸೆಕ್ಷನ್ 3-c ಗೆ ತಿದ್ದುಪಡಿ ತರಲಾಗಿದ್ದು ಸಿಎಂ ಗಳಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತುಗಳನ್ನು ವಾಪಸ್ ಪಡೆಯಲಾಗಿದೆ. ಈ ಪೈಕಿ ಬಾಡಿಗೆ ರಹಿತ ವಸತಿ ಸೌಕರ್ಯಗಳು ಹಾಗೂ ವಾರ್ಷಿಕವಾಗಿ ವಾಸಸ್ಥಳದ ನವೀಕರಣಕ್ಕೆ ನೀಡಲಾಗುತ್ತಿದ್ದ 35,000 ರೂಪಾಯಿಗಳ ಸೌಲಭ್ಯ, ವಾರ್ಷಿಕವಾಗಿ 48,000 ಸಾವಿರ ಮೌಲ್ಯದ ಉಚಿತ ಕರೆಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ವಾಪಸ್ ಪಡೆಯಲಾಗಿದೆ. 

ತಿದ್ದುಪಡಿಯಾದ ನಂತರ ಮುಖ್ಯಮಂತ್ರಿಗಳಿಗೆ ಮಾತ್ರವಷ್ಟೇ ಭದ್ರತೆ ನೀಡಲಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿಗಳೊಂದಿಗೆ ಅವರ ಕುಟುಂಬ ಸದಸ್ಯರಿಗೂ ಭದ್ರತೆ ನೀಡಲಾಗುತ್ತಿತ್ತು. 
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp