ಕೊರೋನಾ ಲಾಕ್'ಡೌನ್ ಲಾಭ ಪಡೆಯಲು ಉಗ್ರರು ಯತ್ನ: ಕರ್ತವ್ಯನಿರತ ಪೊಲೀಸರ ಮೇಲೆ ದಾಳಿಗೆ ಇಸಿಸ್ ಸಂಚು

ಕೊರೋನಾ ವೈರಸ್ ಮಟ್ಟಹಾಕಲು ದೇಶ ಹೆಣಗಾಡುತ್ತಿರುವ ನಡುವಲ್ಲೇ, ಲಾಕ್ ಡೌನ್ ಲಾಭ ಪಡೆಯಲು ಉಗ್ರರು ಯತ್ನ ನಡೆಸುತ್ತಿದ್ದು, ಲಾಕ್ ಡೌನ್ ವೇಳೆ ಭದ್ರತೆ ನೀಡುತ್ತಿರುವ ದೆಹಲಿ ಪೊಲೀಸ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಮಟ್ಟಹಾಕಲು ದೇಶ ಹೆಣಗಾಡುತ್ತಿರುವ ನಡುವಲ್ಲೇ, ಲಾಕ್ ಡೌನ್ ಲಾಭ ಪಡೆಯಲು ಉಗ್ರರು ಯತ್ನ ನಡೆಸುತ್ತಿದ್ದು, ಲಾಕ್ ಡೌನ್ ವೇಳೆ ಭದ್ರತೆ ನೀಡುತ್ತಿರುವ ದೆಹಲಿ ಪೊಲೀಸ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಲಾಕ್'ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ವಿವಿಧ ಪ್ರದೇಶಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು, ಈ ವೇಳೆ ಕರ್ತವ್ಯನಿರತ ಪೊಲೀಸನ್ನು ಗುರಿ ಮಾಡಲು ಇಸಿಸ್ ಉಗ್ರ ಸಂಘಟನೆ ಸಂು ರೂಪಿಸಿದೆ ಎಂದು ವಿಶೇಷ ಪಡೆಯ ಡಿಸಿಪಿಯೊಬ್ಬರು ಹೇಳಿಕೆ ನೀಡಿದ್ದಾರೆ. 

ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 21 ದಿನಗಳ ಕಾಲ ಇಡೀ ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡುವಂತೆ ಘೋಷಣೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com