ಆರೋಗ್ಯ, ರೋಗ ನಿರೋಧಕ ಶಕ್ತಿಗೆ ಈ ಪದಾರ್ಥಗಳ ಬಳಸಿ: ಆಯುಷ್ ಸಚಿವಾಲಯ

ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಉಪಯೋಗಿಸಬೇಕು ಎಂದು ಆಯುಷ್ ಸಚಿವಾಲಯ ಸಲಹೆ ನೀಡಿದೆ. ದೇಹದ ಆರೋಗ್ಯ ಉತ್ತಮಗೊಳ್ಳಲು, ರೋಗ ನಿರೋಧಕ ಶಕ್ತಿ ಸುಧಾರಿಸಲು ಈ ಪದಾರ್ಥಗಳು ಪ್ರಮುಖ ಪಾತ್ರವಹಿಸುತ್ತವೆ
ಆರೋಗ್ಯ, ರೋಗ ನಿರೋಧಕ ಶಕ್ತಿಗೆ ಈ ಪದಾರ್ಥ
ಆರೋಗ್ಯ, ರೋಗ ನಿರೋಧಕ ಶಕ್ತಿಗೆ ಈ ಪದಾರ್ಥ

ನವದೆಹಲಿ: ಕೊರೊನಾ ವೈರಸ್ ಇಡೀ ಪ್ರಪಂಚವನ್ನು ನಡುಗಿಸುತ್ತಿದೆ. ಮಹಾಮಾರಿ ಸೋಂಕಿನಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೋವಿಡ್ -19 ರೋಗ ಬರದಂತೆ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದು ಆಯುಷ್ ಸಚಿವಾಲಯ ಸಲಹೆ ನೀಡಿದೆ.

ಇದಕ್ಕಾಗಿ ಕಾಯಿಸಿದ ನೀರು ಕುಡಿಯಬೇಕು. ಪ್ರಾಣಾಯಾಮ ಹಾಗೂ 30 ನಿಮಿಷ ಧ್ಯಾನ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ. ಇದಲ್ಲದೆ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಉಪಯೋಗಿಸಬೇಕು ಎಂದು ಆಯುಷ್ ಸಚಿವಾಲಯ ಸಲಹೆ ನೀಡಿದೆ. ದೇಹದ ಆರೋಗ್ಯ ಉತ್ತಮಗೊಳ್ಳಲು, ರೋಗ ನಿರೋಧಕ ಶಕ್ತಿ ಸುಧಾರಿಸಲು ಈ ಪದಾರ್ಥಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ. 

ಆಯುಷ್ ಸಚಿವಾಲಯದ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಕೋವಿಡ್ -19 ಶಮನಕ್ಕೆ ಪ್ರಸ್ತುತ ಯಾವುದೇ ಔಷಧಿ ಇಲ್ಲ. ರೋಗ ಗುಣಪಡಿಸುವುದಕ್ಕಿಂತ ಅದನ್ನು ಬರದಂತೆ ತಡೆಗಟ್ಟುವುದು ಉತ್ತಮ ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಆಯುಷ್ ಸಚಿವಾಲಯ ನೀಡಿದ ಸಲಹೆಗಳನ್ನು ಅನುಸರಿಸಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com