ಕೊರೋನಾ ವೈರಸ್: ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬೇಡ: ವೈದ್ಯರಿಗೆ ಸರ್ಕಾರದ ಸೂಚನೆ

ದೇಶದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ ವೈರಸ್ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಲಹೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ ವೈರಸ್ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಲಹೆ ನೀಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವಾಲಯ ಈ ಕುರಿತಂತೆ ಮಾಹಿತಿ ನೀಡಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಹಿಂದೆ ಶಿಫಾರಸ್ಸು ಮಾಡಲಾಗಿದ್ದ ಆ್ಯಂಟಿ ಎಚ್ಐವಿ ಔಷಧಿಗಳಾದ ಲೋಪಿನವೀರ್-ರಿಟೋನವಿರ್ ಸಂಯೋಜನೆ (combination of  Lopinavir-Ritonavir) ಯನ್ನು ನೀಡಲಾಗುತ್ತಿತ್ತು. ಆದರೆ ಈ ವರೆಗೂ ಕೊರೋನಾ ವೈರಸ್ ಗೆ ಯಾವುದೇ ನಿರ್ದಿಷ್ಠ ಔಷಧಿ ಪರಿಣಾಮಕಾರಿ ಎಂದು  ದೃಢಪಟ್ಟಿಲ್ಲ. ಹೀಗಾಗಿ ಆ್ಯಂಟಿ ಎಚ್ಐವಿ ಔಷಧಿ ಬಳಕೆ ಬೇಡ ಅದರ ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿ  ಮಲೇರಿಯಾ ಔಷಧಿಯಾದ hydroxycholoroquine and antibiotic azithromycin ಅನ್ನು ಬಳಕೆ ಮಾಡುವಂತೆ ಹೇಳಿದೆ.

ಅಂತೆಯೇ ಈ ಔಷಧಿಗಳನ್ನು ಸಂಪೂರ್ಣ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲೇ ನೀಡತಕ್ಕದ್ದು ಎಂದು ಸಚಿವಾಲಯ ಹೇಳಿದ್ದು, ರೋಗಿಯಲ್ಲಿನ ಬದಲಾವಣೆಗಳ ಕುರಿತು ಕ್ಷಣಕ್ಷಣದ ಮಾಹಿತಿ ಪಡೆದು ದಾಖಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಔಷಧಿಯಿಂದಾದ ಸೈಡ್ ಎಫೆಕ್ಟ್ ಗಳ  ಕುರಿತು ಕಡ್ಡಾಯವಾಗಿ ಕೇಸ್ ಶೀಟ್ ನಲ್ಲಿ ನಮೂದಿಸುವಂತೆ ಸಚಿವಾಲ ಸೂಚಿಸಿದೆ. ಅಂತೆಯೇ ಈ ಔಷಧಿಗಳನ್ನು 12 ವರ್ಷಕ್ಕಿಂತ ಕೆಳಗಿನ ಪುಟ್ಟ ಮಕ್ಕಳಿಗೆ ಮತ್ತು ಗರ್ಭಿಣಿ ರೋಗಿಗಳಿಗೆ, ಮಗುವಿಗೆ ಹಾಲುಣಿಸುವ ಸ್ತ್ರೀ ರೋಗಿಗಳಿಗೆ ನೀಡದಂತೆಯೂ ಸೂಚಿಸಲಾಗಿದೆ.

ಕೊರೋನಾ ವೈರಸ್ ಗೆ ನಿರ್ಧಿಷ್ಠ ಔಷಧಿ ಅಥವಾ ಲಸಿಕೆ ಇಲ್ಲದ ಕಾರಣ ಆಯಾ ಕ್ಷಣಕ್ಕೆ ಸಿಕ್ಕ ಮಾಹಿತಿಗಳಿಗೆ ಅನುಸಾರವಾಗಿ ಔಷಧಿಗಳ ಶಿಫಾರಸ್ಸು ಮಾಡುವುದಾಗಿ ಅದನ್ನೇ ಬಳಕೆ ಮಾಡುವಂತೆ ವೈದ್ಯರಿಗೆ ಇಲಾಖೆ ಸೂಚನೆ ನೀಡಿದೆ.

ಈ ಹಿಂದೆ ಇಂಗ್ಲೆಂಡ್ ಮೂಲದ ವೈದ್ಯಕೀಯ ಪತ್ರಿಕೆಯೊಂದು ಬ್ರಿಟನ್ ನಲ್ಲಿ 199 ಸೋಂಕಿತರಿಗೆ ಆ್ಯಂಟಿ ಎಚ್ಐವಿ ಔಷಧಿ ನೀಡಲಾಗಿತ್ತು. ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು ಎಂದು ವರದಿ ಮಾಡಿತ್ತು. ಇತ್ತ ಫ್ರಾನ್ಸ್ ನ ನಿಯತಕಾಲಿಕೆಯೊಂದು ವೈದ್ಯರು ನೀಡಿದ ಆ್ಯಂಟಿ  ಮಲೇರಿಯಾ ಔಷಧಿಯಾದ hydroxycholoroquine and antibiotic azithromycin ನಿಂದಾಗಿ 80 ಕೊರೋನಾ ರೋಗಿಗಳ ಪೈಕಿ 78 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com