ಪಿಎಂ- ಕೇರ್ಸ್ ನಿಧಿಗೆ ಎರಡು ವರ್ಷದ ವೇತನ ನೀಡುವುದಾಗಿ ಗಂಭೀರ್ ಘೋಷಣೆ

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ತಮ್ಮ ಎರಡು ವರ್ಷಗಳ ವೇತನವನ್ನು ನೀಡುವುದಾಗಿ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಇಂದು ಘೋಷಿಸಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ತಮ್ಮ ಎರಡು ವರ್ಷಗಳ ವೇತನವನ್ನು ನೀಡುವುದಾಗಿ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಇಂದು ಘೋಷಿಸಿದ್ದಾರೆ.

ತಮ್ಮಗಾಗಿ ದೇಶ ಏನು ಮಾಡಬಹುದು ಎಂದು ಜನ ಕೇಳುತ್ತಾರೆ.ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ನಿಜವಾದ ಪ್ರಶ್ನೆಯಾಗಿದೆ. ಕೊರೋನಾ ಸೋಂಕು ನಿವಾರಣೆ ನಿಟ್ಟಿನಲ್ಲಿ ತಮ್ಮ ಎರಡು ವರ್ಷದ ವೇತನವನ್ನು ಪ್ರಧಾನ ಮಂತ್ರಿ ಕೇರ್ಸ್ ನಿಧಿಗೆ ನೀಡುವುದಾಗಿ ಅವರು ತಿಳಿಸಿದ್ದಾರೆ.ಕೊರೋನಾ ವಿರುದ್ಧದ ಹೋರಾಟಕ್ಕೆ ನೀವು ಮುಂದೆ ಬನ್ನಿ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com