ಮಾರಕ ಕೊರೋನಾ ಸೋಂಕು ನಿವಾರಣೆಗಾಗಿ ವಿದೇಶಿ ದೇಣಿಗೆ ಸ್ವೀಕರಾಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ!

ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ ತೆರೆಯಲಾಗಿರುವ ಪಿಎಂ ಕೇರ್ಸ್ ಫಂಡ್ ನಿಧಿಗೆ ವಿದೇಶಿ ದೇಣಿಗೆ ಸ್ವೀಕಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ ತೆರೆಯಲಾಗಿರುವ ಪಿಎಂ ಕೇರ್ಸ್ ಫಂಡ್ ನಿಧಿಗೆ ವಿದೇಶಿ ದೇಣಿಗೆ ಸ್ವೀಕಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಈ ಹಿಂದೆ ಕೇರಳ ಪ್ರವಾಹದ ಸಂದರ್ಬದಲ್ಲಿ ದೇಶೀಯ ಸಮಸ್ಯೆಗಳಿಗೆ ವಿದೇಶಿ ದೇಣಿಗೆ ಬೇಡ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ ಮಾರಕ ಕೊರೋನಾ ವೈರಸ್ ನಿರ್ವಹಣೆ ಮತ್ತು ನಿರ್ಮೂಲನೆಗಾಗಿ ಪಣ ತೊಟ್ಟಿರುವ ಭಾರತ ಸರ್ಕಾರ ವಿದೇಶಿ ದೇಣಿಗೆ ಸ್ವೀಕಾರಕ್ಕೆ  ಅನುಮೋದನೆ ನೀಡಿದೆ. 

ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ರೋಗ ತಡೆಗೆ ಪ್ರಧಾನಿ ಪರಿಹಾರ ನಿಧಿಗೆ ಅಪಾರ ಪ್ರಮಾಣದ ದೇಣಿಗೆ ಹರಿದು ಬರುತ್ತಿದೆ. ಇದಾಗ್ಯೂ ಹೆಚ್ಚುವರಿ ಕ್ರಮಗಳ ನಿಮಿತ್ತ ವಿದೇಶಿ ದೇಣಿಗೆ ಸ್ವೀಕರಿಸಲು ನಿರ್ಧರಿಸಲಾಗಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿರುವ ಟ್ರಸ್ಟ್ ಗಳು,  ಖಾಸಗಿ ಸಂಸ್ಥೆಗಳು, ಸಂಘಟನೆಗಳು ಅಥವಾ ವ್ಯಕ್ತಿಗಳು ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡಬಹುದು ಎಂದು ಹೇಳಿದೆ.

ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ ಜಮೆ
ಇನ್ನು ಕೊರೋನಾ ವೈರಸ್ ನಿರ್ವಹಣೆಗಾಗಿ ತೆರೆಯಲಾಗಿದ್ದ ಪಿಎಂ ಕೇರ್ಸ್ ಫಂಡ್ ನಿಧಿಗೆ ಈವರೆಗೂ ಬರೊಬ್ಬರಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದ್ದು, ಈ ಪೈಕಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ  ರೂ., ಒಎನ್‍ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ, ವಿಪ್ರೋ ಮತ್ತು ಅಜೀಮ್ ಪ್ರೇಮ್ ಜೀ ಅವರ 1125 ಕೋಟಿ ರೂ ದೇಣಿಗೆ ಸೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com