ಸೋಂಕು ಪರೀಕ್ಷೆಗೆ ಬಂದ ವೈದ್ಯರ ಮೇಲೆ ಕಲ್ಲು ತೂರಾಟ; ಇಬ್ಬರಿಗೆ ಗಾಯ
ಕೊರೊನಾ ವೈರಸ್ ಸೋಂಕು ಆತಂಕ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಇಲ್ಲಿನ ಸ್ಥಳೀಯರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದು, ಅವರ ಮೇಲೆ ಕಲ್ಲು ತೂರಾಟ ನಡೆಸಿ ಓಡಿಸಲಾಗಿದೆ.
Published: 02nd April 2020 10:16 AM | Last Updated: 02nd April 2020 10:20 AM | A+A A-

ವೈದ್ಯರ ಮೇಲೆ ಕಲ್ಲು ತೂರಾಟ
ಇಂದೋರ್: ಕೊರೊನಾ ವೈರಸ್ ಸೋಂಕು ಆತಂಕ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿಕೊರೊನಾ ವೈರಸ್ ಸೋಂಕು ಆತಂಕ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಇಲ್ಲಿನ ಸ್ಥಳೀಯರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದು, ಅವರ ಮೇಲೆ ಕಲ್ಲು ತೂರಾಟ ನಡೆಸಿ ಓಡಿಸಲಾಗಿದೆ.
ಇಂದೋರ್‌ನ ಟಾಟಪಟ್ಟಿ ಬಖಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೂವರು ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಐವರ ತಂಡ ನಿರ್ದಿಷ್ಟ ವ್ಯಕ್ತಿಯ ಪರೀಕ್ಷೆಗಾಗಿ ಸ್ಥಳಕ್ಕೆ ತೆರಳಿತ್ತು. ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ವೈದ್ಯರು ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆದರೆ, ಆ ವ್ಯಕ್ತಿಯ ಕುರಿತು ವಿಚಾರಿಸುತ್ತಿದ್ದಂತೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದಾರೆ.
'ಸೋಂಕು ಶಂಕಿತ ವ್ಯಕ್ತಿಯ ಕುರಿತು ವಿಚಾರಿಸುತ್ತಿದ್ದಂತೆ ಜನರು ಭಾರೀ ವಿರೋಧ ವ್ಯಕ್ತ ಪಡಿಸಲು ಶುರು ಮಾಡಿದರು, ಅವರೊಂದಿಗೆ ಇನ್ನಷ್ಟು ಜನ ಸೇರಿಕೊಂಡು ಕಲ್ಲು ತೂರಾಟ ಆರಂಭಿಸಿದರು. ಸಮೀಪದಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ನಮ್ಮ ರಕ್ಷಣೆ ಬಂದರು' ಎಂದು ಗಾಯಗೊಂಡಿರುವ ವೈದ್ಯೆಯೊಬ್ಬರು ಹೇಳಿದ್ದಾರೆ.