ಲಾಕ್ ಡೌನ್ ಬಳಿಕ ಮುಂದೇನು?: ಕಾರ್ಯತಂತ್ರ ಕುರಿತು ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ

ಕೊರೋನಾ ವಿರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಏ.14 ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ನಂತರದ ದಿನಗಳಲ್ಲಿ ಕೊರೋನ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸುವ ಕಾರ್ಯತಂತ್ರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏ.02 ರಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ್ದಾರೆ. 
ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ
ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ

ನವದೆಹಲಿ: ಕೊರೋನಾ ವಿರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಏ.14 ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ನಂತರದ ದಿನಗಳಲ್ಲಿ ಕೊರೋನ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸುವ ಕಾರ್ಯತಂತ್ರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏ.02 ರಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ್ದಾರೆ. 

ಮುಂದಿನ ಕೆಲವು ವಾರಗಳು ಟೆಸ್ಟಿಂಗ್, ಟ್ರೇಸಿಂಗ್, ಐಸೊಲೇಷನ್ ಹಾಗೂ ಕ್ವಾರಂಟೈನ್ ಹೆಚ್ಚಿನ ಗಮನ ಹರಿಸಬೇಕಾದ ಅಂಶಗಳು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. 

ಅಗತ್ಯ ವೈದ್ಯಕೀಯ ಉತ್ಪನ್ನಗಳ ಪೂರೈಕೆ ವೈದ್ಯಕೀಯ ಉಪಕರಣಗಳ ತಯಾರಿಕೆ ಹಾಗೂ ಔಷಧಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಪೂರೈಕೆಯ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಕೋವಿಡ್-19 ರೋಗಿಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಆಯುಷ್ ವೈದ್ಯರ ಸಹಾಯ ಪಡೆದುಕೊಳ್ಳುವುದು ಆನ್ ಲೈನ್ ತರಬೇತಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳ ಬಳಕೆ ಎನ್ ಸಿಸಿ ಎನ್ಎಸ್ಎಸ್ ಸಿಬ್ಬಂದಿಗಳ ಬಳಕೆ ಮಾಡಿಕೊಳ್ಳುವಂತೆಯೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು ಕೊರೋನಾ ವೈರಸ್ ಗೆ ಜೀವ ಹಾನಿಯನ್ನು ಅತ್ಯಂತ ಕಡಿಮೆ ಇರುವಂತೆ ನೋಡಿಕೊಳ್ಳಲು ಹೇಳಿದ್ದಾರೆ.  

ಮೋದಿ-ಸಿಎಂ ಗಳ ಸಭೆಯ ಪ್ರಮುಖ ವಿಷಯಗಳು ಸೂಚನೆಗಳು ಹೀಗಿವೆ

  1. ವೈರಸ್ ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಅಲ್ಲಿಂದ ಬೇರೆಡೆಗೆ ಹರಡದಂತೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಸಿಎಂಗಳಿಗೆ ಮೋದಿ ಸೂಚನೆ 
  2. ಕೊರೋನಾ ವಿರುದ್ಧದ ಹೋರಾಟಕ್ಕೆ ಸಮುದಾಯಗಳ ನಾಯಕರು, ಸಮಾಜ ಕಲ್ಯಾಣ ಸಂಘಟನೆಗಳೊಂದಿಗೆ ಮಾತನಾಡಲು ಸ್ಥಳಿಯ  ನಾಯಕರಿಗೆ ಸೂಚನೆ
  3. ಜಿಲ್ಲಾ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಗುಂಪುಗಳು ರಚನೆ, ಜಿಲ್ಲಾ ಕಣ್ಗಾವಲು ಅಧಿಕಾರಿಗಳ ನೇಮಕ
  4. ಪರೀಕ್ಷೆಗಾಗಿ ಮಾನ್ಯತೆ ಪಡೆದ ಲ್ಯಾಬ್‌ಗಳಿಂದ ಡಾಟಾ ಪಡೆಯಲು ಸೂಚನೆ, ಇದರಿಂದಾಗಿ ಜಿಲ್ಲೆ, ರಾಜ್ಯ ಕೇಂದ್ರಗಳಲ್ಲಿ ಡಾಟಾ ಸಮನ್ವಯತೆ ಸಾಧ್ಯ 
  5. ಬ್ಯಾಂಕ್ ಗಳಲ್ಲಿ ಜನಸಂದಣಿ ತಪ್ಪಿಸಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಸೂಚನೆ 
  6. ಕೋವಿಡ್-19 ಹರಡುವಿಕೆ ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ನಿಂದ ಒಂದಷ್ಟು ಯಶಸ್ಸು, ಇದಕ್ಕೆ ಸಹಕರಿಸಿದ ರಾಜ್ಯ ಸರ್ಕಾರಗಳಿಗೆ ಮೋದಿ ಧನ್ಯವಾದ
  7. ಆದರೆ ಜಾಗತಿಕ ಮಟ್ಟದಲ್ಲಿರುವ ಪರಿಸ್ಥಿತಿ ಹಾಗೆಯೇ ಇದ್ದು, ಕೆಲವೆಡೆ ಸೆಕೆಂಡ್ ವೇವ್ ಪ್ರಾರಂಭವಾಗಿರುವ ವದಂತಿಗಳ ಬಗ್ಗೆಯೂ ಮೋದಿಯಿಂದ ಮುಖ್ಯಮಂತ್ರಿಗಳಿಗೆ ಮಾಹಿತಿ.
  8. ಸೋಶಿಯಲ್ ಡಿಸ್ಟೆನ್ಸಿಂಗ್ ನ್ನು ಸಾಧ್ಯವಾದಷ್ಟೂ ಮುಂದುವರೆಸಿ ನಿಗಾ ವಹಿಸುವಂತೆ ಮುಖ್ಯಮಂಟ್ರಿಗಳಿಗೆ ಸೂಚನೆ 
  9. ಧಾನ್ಯಗಳ ದಾಸ್ತಾನಿಗೆ ಎಪಿಎಂಸಿಯ ಹೊರತಾಗಿ ಬೇರೆಡೆಗೆ ಗಮನ ಹರಿಸಲು ರಾಜ್ಯಗಳಿಗೆ ಸೂಚನೆ, 
  10. ಕೋವಿಡ್-19 ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯಗಳಿಂದ ಪ್ರಧಾನಿಗೆ ಮಾಹಿತಿ, ವೈದ್ಯಕೀಯ, ಆರ್ಥಿಕ ಸಂಪನ್ಮೂಲಗಳ ಸಾಗಣೆ, ನಿರ್ವಹಣೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ
  11. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಸಾಮಾನ್ಯವಾದ ಎಕ್ಸಿಟ್ ಸ್ಟ್ರಾಟಜಿಗಾಗಿ ಸಲಹೆ ನೀಡಬೇಕೆಂದು ಮೋದಿ ಲಾಕ್ ಡೌನ್ ನಿಂದ ಹೊರಗೆ ಬರುವುದಕ್ಕೆ ರೂಪಿಸಬೇಕಾದ ಕಾರ್ಯತಂತ್ರಕ್ಕೆ ಸಲಹೆ ಕೇಳುವ ಮೂಲಕ ಏ.14 ಕ್ಕೆ ಲಾಕ್ ಡೌನ್ ಅಂತ್ಯದ ಬಗ್ಗೆ ಸುಳಿವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com