ಪೋಲಿಯೋ ಚುಚ್ಚುಮದ್ದು ಅಭಿಯಾನದ ಮೇಲೂ ಕೊರೋನಾ ಕರಿನೆರಳು: 6 ತಿಂಗಳವರೆಗೆ ಸ್ಥಗಿತ!

ಕೊರೋನಾ ಕರಿನೆರಳು ಪೋಲಿಯೋ ಅಭಿಯಾನದ ಮೇಲೂ ಬಿದ್ದಿದ್ದು, ಪೋಲಿಯೋ ಅಭಿಯಾನವನ್ನು 6 ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ. 
ಪೋಲಿಯೋ ಚುಚ್ಚುಮದ್ದು ಅಭಿಯಾನದ ಮೇಲೂ ಕೊರೋನಾ ಕರಿನೆರಳು: 6 ತಿಂಗಳವರೆಗೆ ಸ್ಥಗಿತ!
ಪೋಲಿಯೋ ಚುಚ್ಚುಮದ್ದು ಅಭಿಯಾನದ ಮೇಲೂ ಕೊರೋನಾ ಕರಿನೆರಳು: 6 ತಿಂಗಳವರೆಗೆ ಸ್ಥಗಿತ!

ಲಂಡನ್: ಕೊರೋನಾ ಕರಿನೆರಳು ಪೋಲಿಯೋ ಅಭಿಯಾನದ ಮೇಲೂ ಬಿದ್ದಿದ್ದು, ಪೋಲಿಯೋ ಅಭಿಯಾನವನ್ನು 6 ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅದರ ಪಾಲುದಾರರು ಮುಂದಿನ 6 ತಿಂಗಳವರೆಗೆ ರಾಷ್ಟ್ರೀಯ ಚುಚ್ಚುಮದ್ದಿ ಅಭಿಯಾನ, ಪೋಲಿಯೋ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಕೊರೋನಾ ಸಮುದಾಯಕ್ಕೆ ಹಾಗೂ ಮುನ್ನೆಲೆಯಲ್ಲಿರುವ ಸಿಬ್ಬಂದಿಗಳಿಗೆ ಹರಡದಂತೆ ತಡೆಯುವುದು ಇದರ ಉದ್ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಪೋಲಿಯೋ ಮೇಲ್ವಿಚಾರಣಾ ಮಂಡಳಿ ಸಭೆಯ ನಂತರ ಈ ಅಧಿಕೃತ ಘೋಷಣೆ ಪ್ರಕಟಗೊಂಡಿದೆ. ಪಾಕಿಸ್ತಾನ ಅಫ್ಘಾನಿಸ್ತಾನ, ನೈಜೀರಿಯಾ ಸೇರಿದಂತೆ 10 ರಾಷ್ಟ್ರಗಳಲ್ಲಿ ಪೋಲಿಯೋ ಸಮಸ್ಯೆ ಇನ್ನೂ ಸವಾಲಿನ ಸಂಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com