'ಸ್ಟೇ ಅಟ್ ಹೋಮ್' ಪರಿಣಾಮ: ಅನೇಕ ನಗರಗಳ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಮಹತ್ತರ ಪ್ರಗತಿ 

ಜನತಾ ಕರ್ಫ್ಯೂ ಮತ್ತು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಾವಶ್ಯಕವಲ್ಲದ ಕೈಗಾರಿಕಾ ಘಟಕಗಳು ಮುಚ್ಚಿದ್ದು,  ಬಹುತೇಕ ವಾಹನಗಳು ರಸ್ತೆಗಿಳಿಯದ ಪರಿಣಾಮ 85 ಪ್ರಮುಖ ನಗರಗಳ ಜನರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ  ವರದಿಯೊಂದರಲ್ಲಿ ತಿಳಿಸಿದೆ.
ಮೈಸೂರು ನಗರ
ಮೈಸೂರು ನಗರ

ನವದೆಹಲಿ: ಜನತಾ ಕರ್ಫ್ಯೂ ಮತ್ತು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಾವಶ್ಯಕವಲ್ಲದ ಕೈಗಾರಿಕಾ ಘಟಕಗಳು ಮುಚ್ಚಿದ್ದು,  ಬಹುತೇಕ ವಾಹನಗಳು ರಸ್ತೆಗಿಳಿಯದ ಪರಿಣಾಮ 85 ಪ್ರಮುಖ ನಗರಗಳ ಜನರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ  ವರದಿಯೊಂದರಲ್ಲಿ ತಿಳಿಸಿದೆ.

ಮಾರ್ಚ್ 16 ಮತ್ತು ಮಾರ್ಚ್ 29ರ ನಡುವಿನ ಗಾಳಿಯ ಗುಣಮಟ್ಟವನ್ನು ಉಲ್ಲೇಖಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರದಿಯನ್ನು ನೀಡಿದೆ. ಮಾರ್ಚ್ 22 ರಂದು ಜನತಾ ಕರ್ಫ್ಯೂ ಆದ ನಂತರ ಹೆಚ್ಚಿನ ಜನಸಾಂದ್ರತೆ ಹೊಂದಿರುವ ನಗರಗಳಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಪ್ರಗತಿ ಕಂಡುಬಂದಿದೆ. 

ವಾಯು ಗುಣಮುಟ್ಟ ಸ್ಯೂಚ್ಯಂಕ್ಯದಲ್ಲಿಯೂ ಮಹತ್ತರ ಬದಲಾವಣೆ ಕಂಡುಬಂದಿದೆ.  ಏಳು ನಗರಗಳು ಉತ್ತಮ ವರ್ಗದಲ್ಲಿದ್ದರೆ 17 ನಗರಗಳು ತೃಪ್ತಿದಾಯಕ ವರ್ಗದಲ್ಲಿವೆ. ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ಸುಧಾರಣೆಯಾಗಿದೆ ಎಂದು ಇಂಡೊ ಜೆನಿಟಿಕ್ ಪ್ಲೈನ್ಸ್ ವರದಿಯಲ್ಲಿ ತಿಳಿಸಿದೆ. 

ಕರ್ಫ್ಯೂ ಜಾರಿಯಾದ ದಿನ ಚೆನ್ನೈ, ಮುಂಬೈ ತೃಪ್ತಿದಾಯಕ ವರ್ಗದಲ್ಲಿವೆ. ಮಾರನೆ ದಿನವೂ ಸ್ಥಳೀಯ ಸಹಕಾರದ ಕಾರಣ ಚೆನ್ನೈನಲ್ಲಿ ವಾಯು ಗುಣಮುಟ್ಟ ಸೂಚ್ಯಂಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಕೈಗಾರಿಕಾ ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಸಾಕಾರಾತ್ಮಕ ಪರಿಣಾಮ ಕಂಡುಬಂದಿದೆ. ಕೈಗಾರಿಕಾ ಪ್ರದೇಶಗಳಾದ ವಾಪಿ, ರತ್ಲಂ, ಸಾತ್ನಾ, ಚಂದ್ರಪುರದಲ್ಲಿಯೂ ವಾಯು ಗುಣಮಟ್ಟದ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ಒಟ್ಟಾರೆಯಾಗಿ ಜನತಾ ಕರ್ಫ್ಯೂನಿಂದ ವಾಯುವಿನ ಗುಣಮದಲ್ಲಿ ಪ್ರಗತಿ ಕಂಡುಬಂದಿದೆ. 
 
ಲಾಕ್ ಡೌನ್ ಮುಂಚೆ ಮಾರ್ಚ್ 16 ರಂದು ವಾಯು ಗುಣಮಟ್ಟ ಸೂಚ್ಯಂಕದಲ್ಲಿ  55 ನಗರಗಳು ಉತ್ತಮ ಮತ್ತು ತೃಪ್ತಿದಾಯಕ ವರ್ಗದಲ್ಲಿದ್ದವು.  ದಿನ ಕಳೆದಂತೆ  ಈ ನಗರಗಳು ಕೂಡಾ ಮಧ್ಯಮ ವರ್ಗದತ್ತ ಚಲಿಸಲು ಆರಂಭಿಸಿದ್ದವು. ಆದರೆ, ಮಾರ್ಚ್ 22 ರಂದು ಪರಿಸ್ಥಿತಿ ಬದಲಾವಣೆಯಾಗಿದೆ. 

ಜನತಾ ಕರ್ಫ್ಯೂ ದಿನವಾದ ಮಾರ್ಚ್ 22 ರಂದು 67 ನಗರಗಳು ವಾಯು ಗುಣಮಟ್ಟ ಸೂಚ್ಯಂಕದ ಉತ್ತಮ ಮತ್ತು ತೃಪ್ತಿದಾಯಕ ವರ್ಗದಲ್ಲಿದ್ದವು ಎಂದು ವಿಶ್ಲೇಷಿಸಲಾಗಿದೆ. ಈ ಟ್ರೆಂಡ್ ಇತ್ತರ ನಗರಗಳಲ್ಲಿಯೂ ಹೆಚ್ಚಾಗಿದ್ದು, ವಾಯು ಗುಣಮುಟ್ಟ ಸೂಚ್ಯಂಕದಲ್ಲಿ ಉತ್ತಮ ಗುಣಮಟ್ಟ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com