ಲಾಕ್ ಡೌನ್ ಮತ್ತೆ ದೇಶಾದ್ಯಂತ ವಿಸ್ತರಿಸುವ ಅಗತ್ಯ ಇಲ್ಲ: ಜೀವಶಾಸ್ತ್ರಜ್ಞ ಸತ್ಯಜಿತ್ ಮೇಯರ್

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ನಂತರ ಮತ್ತೆ ದೇಶಾದ್ಯಂತ ಲಾಕ್ ಡೌನ್ ಅನ್ನು ವಿಸ್ತರಿಸುತ್ತಾರೆಯೇ? ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರನ್ನು ಕಾಡುತ್ತಿದ್ದೆ.
ಸತ್ಯಜಿತ್ ಮೇಯರ್
ಸತ್ಯಜಿತ್ ಮೇಯರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ನಂತರ ಮತ್ತೆ ದೇಶಾದ್ಯಂತ ಲಾಕ್ ಡೌನ್ ಅನ್ನು ವಿಸ್ತರಿಸುತ್ತಾರೆಯೇ? ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರನ್ನು ಕಾಡುತ್ತಿದ್ದೆ. ಆದರೆ ಲಾಕ್ ಡೌನ್ ಅನ್ನು ಮತ್ತೆ ದೇಶಾದ್ಯಂತ ವಿಸ್ತರಿಸುವ ಅಗತ್ಯ ಇಲ್ಲ. ಅಗತ್ಯವಿರುವ ಕಡೆ ವಿಸ್ತರಿಸಬಹುದು ಎಂದು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಸತ್ಯಜಿತ್ ಮೇಯರ್ ಅವರು ಹೇಳಿದ್ದಾರೆ.

ಹೆಚ್ಚು ಜನರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಿದ ನಂತರ ನಮಗೆ ದೇಶದಲ್ಲಿನ ಟ್ರೆಂಡ್ ಸ್ಪಷ್ಟವಾಗಿ ತಿಳಿಯುತ್ತದೆ.  ಐಸಿಎಂಆರ್ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಸಾಕಷ್ಟು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಅದು ಸಂಪೂರ್ಣವಾಗಿ ಲಭ್ಯವಾದ ನಂತರ ಲಾಕ್‌ಡೌನ್ ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮವನ್ನು ಬೀರುತ್ತಿದೆಯೇ ಅಥವಾ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. 21 ದಿನಗಳ ಲಾಕ್ ಡೌನ್ ಅವಧಿ ಮುಗಿದ ನಂತರ ಕೆಲವು ಪ್ರದೇಶಗಳಲ್ಲಿ ಮಾತ್ರ ಲಾಕ್‌ಡೌನ್‌ ವಿಸ್ತರಿಸಬಹುದು ಎಂದು ಮೇಯರ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಲಾಕ್ ಡೌನ್ ಒಂದೇ ಪರಿಹಾರವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೇಯರ್ ಅವರು, ಈ ಪ್ರಶ್ನೆಗೆ ಉತ್ತರಿಸಲು ನಾನು ಸಂಪೂರ್ಣವಾಗಿ ಅಸಮರ್ಥನಾಗಿದ್ದೇನೆ. ಈ ದೊಡ್ಡ ಗಾತ್ರದ ಜನಸಂಖ್ಯೆ ಮತ್ತು ಅಸಮಾನತೆಯ ಮಟ್ಟ ಮತ್ತು ಹರಡುವಿಕೆಯ ಪ್ರಮಾಣವನ್ನು ಹೇಗೆ ಎದುರಿಸುವುದು ಎಂಬುದು ದೊಡ್ಡ ಸವಾಲಾಗಿದೆ. ನನ್ನ ಸರಳ ಮನಸ್ಸಿನ ದೃಷ್ಟಿಯಲ್ಲಿ, ಈ ವೈರಸ್ ಹರಡುವುದನ್ನು ನಾವು ಎಲ್ಲ ರೀತಿಯಿಂದಲೂ ತಡೆಯುವ ಅಗತ್ಯವಿದೆ ಎಂದು ನಾನು ಹೇಳುತ್ತೇನೆ. ವೈರಸ್ ಕಾಡ್ಗಿಚ್ಚಿನಂತೆ ಹರಡಿದರ ಏನಾಗುತ್ತದೆ ಎಂಬುದಕ್ಕೆ ನ್ಯೂಯಾರ್ಕ್‌ ಸಾಕ್ಷಿಯಾಗಿದೆ. ಅಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಆಸ್ಪತ್ರೆಗಳು ಇವೆ ಮತ್ತು ತುರ್ತು ಸಹಾಯಕ್ಕಾಗಿ ಬೇಕಾದ ಎಲ್ಲ ವ್ಯವಸ್ಥೆ ಹೊಂದಿದೆ. ಆದರೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನುನಮ್ಮ ನಗರಗಳಲ್ಲಿ ಏನಾಗಬಹುದು ಎಂದು ಯೋಚಿಸಲು ಸಹ ಭಯವಾಗುತ್ತಿದೆ ಎಂದು ಮೇಯರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com