ಇಂದೋರ್: ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ನಾಲ್ವರ ವಿರುದ್ಧ ಎನ್ ಎಸ್ ಎ ಅಡಿ ಪ್ರಕರಣ ದಾಖಲು 

ಇಂದೂರ್ ನ  ತಾತ್ಪಟ್ಟಿ ಬಖಾಲ್ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಾಲ್ವರು ವಿರುದ್ಧ ಜಿಲ್ಲಾಡಳಿತ  ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ತಾತ್ಪಟ್ಟಿ ಬಖಾಲ್ ಪ್ರದೇಶದ ನಿವಾಸಿಗಳು
ತಾತ್ಪಟ್ಟಿ ಬಖಾಲ್ ಪ್ರದೇಶದ ನಿವಾಸಿಗಳು

ಭೂಪಾಲ್ : ಇಂದೂರ್ ನ  ತಾತ್ಪಟ್ಟಿ ಬಖಾಲ್ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಾಲ್ವರು ವಿರುದ್ಧ ಜಿಲ್ಲಾಡಳಿತ  ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶದ ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಈ ರೀತಿಯ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಐವರು ಸದಸ್ಯರನ್ನೊಳಗೊಂಡ ತಂಡ ಬುಧವಾರ ಕೋವಿಡ್ -19 ರೋಗಿಗಳು ಹಾಗೂ ಕ್ವಾರೆಂಟೈನ್ ನಲ್ಲಿರುವವರ ಸಂಬಂಧಿಕರ ಭೇಟಿಗಾಗಿ ತಾತ್ಪಟ್ಟಿ ಬಖಾಲ್ ಪ್ರದೇಶಕ್ಕೆ ತೆರಳಿದ್ದಾಗ ಗುಂಪುದೊಂದು ಕಲ್ಲುಗಳಿಂದ ದಾಳಿ ನಡೆಸಿತ್ತು, ಇದರಿಂದಾಗಿ ಇಬ್ಬರು ಮಹಿಳಾ ವೈದ್ಯೆಯರು ಗಾಯಗೊಂಡಿದ್ದರು.

ಈ ಘಟನೆ ಸಂಬಂದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಲ್ಲೆ ಘಟನೆ ಸಂಬಂಧ ಆರು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಇಂದೋರ್ ಛತ್ರಿಪುರ ಠಾಣೆ ಉಸ್ತುವಾರಿ ಕರಣ್ ಸಿಂಗ್ ಶಕ್ತಾವತ್ ಹೇಳಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ವದಂತಿ ಹರಡುವಿಕೆ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದಾಂಡೋಟಿಯಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com