ಕೊರೋನಾ ವೈರಸ್ ಎಫೆಕ್ಟ್: ಉದ್ಧವ್ ಠಾಕ್ರೆ ಶಾಸಕ ಚುನಾವಣೆ ವಿಳಂಬ?

ಕೊರೋನಾ ವೈರಸ್ ಭೀತಿಯಿಂದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಶಾಸಕ ಸ್ಥಾನದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬಯಿ: ಕೊರೋನಾ ವೈರಸ್ ಭೀತಿಯಿಂದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಶಾಸಕ ಸ್ಥಾನದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ ಸರಕಾರದ ಮುಖ್ಯಮಂತ್ರಿಯಾಗಿ ಉದ್ಧವ್‌ ಅವರು 2019ರ ನ. 28ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಸಂವಿಧಾನದ 164 (4) ಪರಿಚ್ಛೇದದ ಪ್ರಕಾರ, ಮುಖ್ಯಮಂತ್ರಿ ಅಥವಾ ಸಚಿವರಾದವರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಆರು ತಿಂಗಳ ಒಳಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಬೇಕು.

ಹಾಲಿ ಯಾವುದೇ ಸದನದ ಸದಸ್ಯರಲ್ಲದ ಉದ್ಧವ್‌ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಮೇ 28ರ ಒಳಗಾಗಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಬೇಕಾದ ಅವಶ್ಯಕತೆಯಿದೆ.

ಮಹಾರಾಷ್ಟ್ರ ವಿಧಾನ ಪರಿಷತ್‌ನ 9 ಸ್ಥಾನಗಳು ಏ.24ರಂದು ತೆರವಾಗಲಿವೆ. ಹೀಗಾಗಿ ಮೇಲ್ಮನೆಗೆ ಆಯ್ಕೆಯಾಗಬಹುದು ಎನ್ನುವುದು ಠಾಕ್ರೆ ಲೆಕ್ಕಾಚಾರವಾಗಿತ್ತು. ಆದರೆ ಚುನಾವಣೆ ಆಯೋಗವು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇದುವರೆಗೆ ಪರಿಷತ್‌ ಚುನಾವಣೆ ದಿನಾಂಕ ಪ್ರಕಟಿಸಿಲ್ಲ.

ಒಂದೊಮ್ಮೆ ಆರು ತಿಂಗಳ ಒಳಗಾಗಿ ಶಾಸನಸಭೆ ಸದಸ್ಯರಾಗಿ ಆಯ್ಕೆಯಾಗದಿದ್ದರೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗುತ್ತದೆ. ಉದ್ಧವ್ ಠಾಕ್ರೆ ಆರು ತಿಂಗಳ ಮುಖ್ಯಮಂತ್ರಿ ಅವಧಿ ಮೇ 28ಕ್ಕೆ ಕೊನೆಗೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com