ಶಂಖ , ಜಾಗಟೆಯಾಯಿತು, ಏಪ್ರಿಲ್ 5 ರಂದು ಮೋದಿ ನೀಡಿದ ಮತ್ತೊಂದು ಟಾಸ್ಕ್ ಏನು..?

ಚಪ್ಪಾಳೆ, ಶಂಖ, ಜಾಗಟೆ ಬಳಿಕ ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿಯವರು ಜನತೆಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚಪ್ಪಾಳೆ, ಶಂಖ, ಜಾಗಟೆ ಬಳಿಕ ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿಯವರು ಜನತೆಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. 

ಇದೆ 5 ರಂದು ರಾತ್ರಿ 9 ಗಂಟೆಗೆ ಸರಿಯಾಗಿ ದೇಶದ ಜನತೆ ಮನೆಯಲ್ಲಿನ ಲೈಟ್ ಗಳನ್ನು ಆರಿಸಿ, 9 ನಿಮಿಷಗಳ ಕಾಲ ದೀಪ, ಮೊಂಬತ್ತಿ ಹಚ್ಚಿ, ಎಲ್ಲರೂ ಅಂಧಕಾರ, ಮಹಾಮಾರಿ ಕರೋನ ತೊಲಗಿಸಲು ಸಹಕರಿಸಿ ಎಂದು ಪ್ರಧಾನಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪ್ರಧಾನಿ, ಲಾಕ್ ಡೌನ್ ಜಾರಿಯಾಗಿ ಇಂದಿಗೆ 10 ದಿನಗಳಾಗಿವೆ. ಕಳೆದೆ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಲಾಗಿತ್ತು. ಇದನ್ನು ದೇಶದ ಜನತೆ ಯಶಸ್ವಿಯೂಗೊಳಿಸಿದ್ದು ಇದನ್ನು ಈಗ ವಿಶ್ವವೇ ಅನುಸರಿಸಿತ್ತು.

ಇದೀಗ ಜನತೆಗೆ ಮತ್ತೊಂದು ಟಾಸ್ಕ್ ನೀಡಿರುವ ಮೋದಿಯವರು, ರಸ್ತೆಗಿಳಿಯದೆ, ತಮ್ಮ ತಮ್ಮ ಮನೆಗಳ ಮಹಡಿಗಳ ಮೇಲೆಯೇ ನಿಂತು ಮುಂಬತ್ತಿ, ಮೊಬೈಲ್ ಟಾರ್ಚ್, ಇತರೆ ಟಾರ್ಚ್ ಗಳನ್ನು ಬಳಸಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com