ಕೊರೋನಾ ಲಾಕ್'ಡೌನ್: ಕ್ರೀಡಾ ಐಕಾನ್'ಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ

ಕೊರೋನಾ ವೈರಸ್ ಲಾಕ್ ಡೌನ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಇತರೆ ಕ್ರಿಕೆಟ್ ಐಕಾನ್ ಗಳು ಹಾಗೂ ಅಥ್ಲೀಟ್ಸ್ ಗಳೊಂದಿಗೆ ಚರ್ಚೆ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಕೊರೋನಾ ಲಾಕ್'ಡೌನ್: ಕ್ರಿಕೆಟ್ ಐಕಾನ್'ಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ
ಕೊರೋನಾ ಲಾಕ್'ಡೌನ್: ಕ್ರಿಕೆಟ್ ಐಕಾನ್'ಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಇತರೆ ಕ್ರಿಕೆಟ್ ಐಕಾನ್ ಗಳು ಹಾಗೂ ಅಥ್ಲೀಟ್ಸ್ ಗಳೊಂದಿಗೆ ಚರ್ಚೆ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಪ್ರಧಾನಿ ಮೋದಿ ಜೊತೆಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಈ ಸಂದರ್ಭದಲ್ಲಿ ಹಾಜರಿದ್ದು, ಮೋದಿಯವರು ಒಟ್ಟು ಕ್ರಿಕೆಟ್ ಐಕಾನ್ ಗಳು ಸೇರಿದಂತೆ ಒಟ್ಟು 49 ಅಥ್ಲೀಟ್ಸ್ ಗಳೊಂದಿಗೆ ಮಾತುಕತೆ ನಡೆಸಿ್ದಾರೆಂದು ತಿಳಿದುಬಂದಿದೆ. 

49 ಮಂದಿಯ ಪೈಕಿ 12 ಮಂದಿ ಪ್ರಮುಖ ವ್ಯಕ್ತಿಗಳಿಗೆ ಮೋದಿಯವರೊಂದಿಗೆ ಮಾತನಾಡಲು 3 ನಿಮಿಷಗಳ ಕಾಲಾವಕಾಶ ನೀಡಲಾಗಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿದೆ. ಆದರೆ, ಯಾವ ಯಾವ ಅಥ್ಲೀಟ್ಸ್ ಗಳೊಂದಿಗೆ ಮಾತುಕತೆ ನಡೆಸಿದ್ದಾರೆಂಬುದರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ರೀತಿಯ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ದೇಶದ ಪರಿಸ್ಥಿತಿಗಳು ಯಾವಾಗ ಸಾಮಾನ್ಯಗೊಳ್ಳುತ್ತದೆ ಎಂಬುದು ಇನ್ನು ಖಚಿತವಾಗುತ್ತಿಲ್ಲ. ಲಾಕ್ ಡೌನ್ ಪರಿಣಾಮ ಏಪ್ರಿಲ್ 15ರವರೆಗೂ ಐಪಿಎಲ್ ಕೂಡ ಮುಂದೂಡಲಾಗಿದೆ. 

ಮೋದಿಯವರೊಂಡಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆದ ಕುರಿತ ಪ್ರಶ್ನೆಗೆ ಸೌರವ್ ಗಂಗೂಲಿಯವರು ಉತ್ತರಿಸಿದ್ದು, ಹೌದು ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದೇವೆಂದು ಹೇಳಿದರೂ, ಆದರೆ, ಯಾವ ವಿಚಾರದ ಬಗ್ಗೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. 

ಕ್ರೀಡಾ ಐಕಾನ್ ಗಳಿಗೆ ಮೋದಿಯವರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಪೇಜ್ ಗಳಲ್ಲಿ ಸಾಮಾಜಿಕ ಅಂತರದ ಕುರಿದು ಜನರಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ಸಚಿವಾಲಯ ಮೂಲಗಳು ಮಾಹಿತಿ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ತೆಂಡೂಲ್ಕರ್, ಗಂಗೂಲಿ, ಕೊಹ್ನಿ ಸೇರಿದಂತೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ಜಹೀರ್ ಖಾನ್, ಯುವರಾಜ್ ಸಿಂಗ್, ಕೆ.ಎಲ್. ರಾಹುಲ್ ಹಾಗೂ ಪಿವಿ ಸಿಂಧು, ನೀರಜ್ ಚೋಪ್ರಾ, ವಿಶ್ವನಾತ್ ಆನಂತ್, ಹಿಮಾ ದಾಸ್, ಮೇರಿ ಕೋಮ್, ಅಮಿತ್ ಪಂಘಾಲ್, ವಿನೇಶ್ ಪೊಗಟ್, ಮನಿ ಭಕೇರ್ ಸೇರಿದಂತೆ ಇತರರು ಭಾಗಿಯಾಗಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com