ಲಾಕ್ ಡೌನ್ ಎಫೆಕ್ಟ್: ದೂರದರ್ಶನದಲ್ಲಿ ಅತೀ ಹೆಚ್ಚು ವೀಕ್ಷಣೆಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ರಾಮಾಯಣ

ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್ ನಿಂದ ಮರು ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ನೂತನ ದಾಖಲೆಯೊಂದನ್ನು ಬರೆದಿದೆ.
ರಾಮಾಯಣ ಸೀರಿಯಲ್
ರಾಮಾಯಣ ಸೀರಿಯಲ್

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್ ನಿಂದ ಮರು ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ನೂತನ ದಾಖಲೆಯೊಂದನ್ನು ಬರೆದಿದೆ.

ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೇರಲಾಗಿದ್ದ ಲಾಕ್ ಡೌನ್ ಬೆನ್ನಲ್ಲೇ ದೂರದರ್ಶನ ತನ್ನ ಹಳೆಯ ಬ್ಲಾಕ್ ಬಸ್ಟರ್ ಸೀರಿಯಲ್ ಗಳಾದ ರಾಮಾಯಣ, ಮಹಾಭಾರತ ಸೇರಿದಂತೆ ಹಳೆಯ ಸೀರಿಯಲ್ ಗಳನ್ನು ಮರು ಪ್ರಸಾರ ಮಾಡುತ್ತಿದೆ. ಈ ಪೈಕಿ  ರಾಮಾಯಣ ಸೀರಿಯಲ್ (ಹಿಂದಿ ಭಾಷೆ) ಕೇವಲ 4 ಶೋಗಳ ಮೂಲಕ ಅತೀ ಹೆಚ್ಚು ವೀಕ್ಷಣೆಯನ್ನು ಕಂಡ ಸೀರಿಯಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಈ ಬಗ್ಗೆ ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ತನ್ನ ವರದಿ ನೀಡಿದ್ದು, ಕೇವಲ ನಾಲ್ಕು ಶೋಗಳಿಂದ ರಾಮಾಯಣ ಧಾರಾವಾಹಿ ಬರೊಬ್ಬರಿ 170 ಮಿಲಿಯನ್ ವೀಕ್ಷಕರ ಸೆಳೆದಿದೆ. ರಾಮಾಯಣದ ಮರು ಪ್ರಸಾರದ ಮೊದಲ ಶೋವನ್ನು 34 ಮಿಲಿಯನ್ ಮಂದಿ ವೀಕ್ಷಣೆ  ಮಾಡಿದ್ದು, ಸಂಜೆ ಮರು ಪ್ರಸಾರವಾದ ಶೋವನ್ನು 45 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಆ ಮೂಲಕ ಅತೀ ಹೆಚ್ಚು ವೀಕ್ಷಣೆ ಕಂಡ ಧಾರಾವಾಹಿ ಎಂಬ ಹೆಗ್ಗಳಿಗೂ ರಾಮಾಯಣ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com