'ಸ್ಟೇ ಹೋಂ. ಸೇವ್ ಲೈವ್ಸ್': ಕೊರೋನಾ ಕುರಿತು ಡೂಡಲ್ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಗೂಗಲ್

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮಟ್ಟ ಹಾಕಲು ಭಾರತ ಕೂಡ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವಲ್ಲೇ ಇಂಟರ್ನೆಟ್ ಸರ್ಚ್ ದೈತ್ಯ ಗೂಗಲ್ ಕೂಡ ವಿಶೇಷ ಡೂಡಲ್ ವೊಂದನ್ನು ಬಿಡಿಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. 
'ಸ್ಟೇ ಹೋಂ. ಸೇವ್ ಲಿವ್ಸ್': ಕೊರೋನಾ ಕುರಿತು ಡೂಡಲ್ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಗೂಗಲ್
'ಸ್ಟೇ ಹೋಂ. ಸೇವ್ ಲಿವ್ಸ್': ಕೊರೋನಾ ಕುರಿತು ಡೂಡಲ್ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಗೂಗಲ್

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮಟ್ಟ ಹಾಕಲು ಭಾರತ ಕೂಡ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವಲ್ಲೇ ಇಂಟರ್ನೆಟ್ ಸರ್ಚ್ ದೈತ್ಯ ಗೂಗಲ್ ಕೂಡ ವಿಶೇಷ ಡೂಡಲ್ ವೊಂದನ್ನು ಬಿಡಿಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. 

ಕೊರೋನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಡೂಡಲ್ ಬಿಡಿಸಿರುವ ಗೂಗಲ್, ಲಾಕ್ ಡೌನ್ ನಿಯಮ ಪಾಲಿಸಿ, ಮನೆಯಲ್ಲಿಯೇ ಇರಿ. ವೈರಸ್ ವಿರುದ್ಧ ಹೋರಾಡಿ ಎಂದು ತಿಳಿಸಿದೆ. 

ಗೂಗಲ್ ಮುಖಪುಟದಲ್ಲಿಯೇ ಆಕರ್ಷಕ ಡೂಡಲ್ ಬಿಡಿಸಲಾಗಿದ್ದು, ಜನರು ಸಾಮಾಜಿಕ ಅಂತರ, ಸ್ವಚ್ಛಕೆ ಕುರಿತು ಸಂದೇಶವನ್ನು ನೀಡುತ್ತಿದೆ. ಮನೆಯಲ್ಲಿದ್ದು, ಇತರರ ಜೀವ ಕಾಪಾಡಿ. ನಿಮ್ಮವರನ್ನೂ ರಕ್ಷಣೆ ಮಾಡಿ ಎಂದು ಗೂಗಲ್ ಎಂಬ ಇಂಗ್ಲೀಷ್ ಅಕ್ಷರಗಳಲ್ಲಿಯೇ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com